ಜಿಲ್ಲೆ

ಏಕನಾಥ್ ದಂಡಕೇರಿ ಅವರಿಗೆ ಶ್ರೇಷ್ಠ ಇಂಜಿನಿಯರ್ ಪ್ರಶಸ್ತಿ

Mangaluru - Hariprasad Rai


ಮಂಗಳೂರು : ಭಾರತ ರತ್ನ ದಿ.ಸರ್. ಎಂ. ವಿಶ್ವೇಶ್ವರಯ್ಯ ಅವರ ವೃತ್ತಿ ಕೌಶಲ, ಸಾಧನೆ ದೇಶದ ಎಲ್ಲ ಇಂಜಿನಿಯರ್‌ಗಳಿಗೆ ಮಾದರಿ. ತಮ್ಮ ವಿಶಿಷ್ಟ ಕಾರ್ಯಕ್ಷಮತೆಯ ಮೂಲಕ ವಿಶ್ವ ಮನ್ನಣೆ ಪಡೆದ ಮಹಾನ್ ವ್ಯಕ್ತಿ ಎಂದು ಇಂಜಿನಿಯರ್ ಏಕನಾಥ್ ದಂಡಕೇರಿ ಹೇಳಿದರು.
ರೋಟರಿ ಮಂಗಳೂರು ಸಿಟಿ ಸಂಸ್ಥೆಯ ವೃತ್ತಿಪರ ಸೇವಾ ಯೋಜನೆಯ ಅಂಗವಾಗಿ ಉತ್ಸವ್ ಸಭಾಂಗಣದಲ್ಲಿ ನಡೆದ
ಇಂಜಿನಿಯರ್ಸ್‌ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ವಿಶ್ವೇಶ್ವರಯ್ಯ ಅವರ ಕರ್ತವ್ಯ ಮತ್ತು ಸಮಯ ಪ್ರಜ್ಞೆ ಇಂಜಿನಿಯರ್ಸ್‌ಗಳಿಗೆ ಸದಾ ದಾರಿದೀಪ ಎಂದರು.
ಇದೇ ಸಂದರ್ಭ ಏಕನಾಥ್ ದಂಡಕೇರಿಯವರನ್ನು ಸಿವಿಲ್ ಇಂಜಿನಿಯರ್ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು
ರೋಟರಿ ಸಂಸ್ಥೆಯ ಶ್ರೇಷ್ಠ ಇಂಜಿನಿಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರೋಟರಿ ಸಂಸ್ಥೆಯ ಸಮುದಾಯ ಸೇವಾ ಯೋಜನೆಯ ನಿರ್ದೇಶಕರಾದ ಡಾ. ರಂಜನ್ ರಾವ್ ಪ್ರಶಸ್ತಿ ವಿಜೇತರ ಸಾಧನೆಯ ವಿವರ ನೀಡಿದರು. ಪದಾಧಿಕಾರಿಗಳಾದ ಕ್ಯಾನುಟ್ ಪಿಂಟೋ, ಸುದೇಶ್, ಸರಿತಾ ಡಿಸೋಜ, ಸುಮಿತ್ ರಾವ್ ಉಪಸ್ಥಿತರಿದ್ದರು. ರೋಟರಿ ಸಿಟಿ ಸಂಸ್ಥೆಯ ಅಧ್ಯಕ್ಷ ಪ್ರಶಾಂತ್ ರೈ ಸ್ವಾಗತಿಸಿ, ಜತೆ ಕಾರ್ಯದರ್ಶಿ ಸನಿತ್ ಶೇಟ್ ವಂದಿಸಿದರು.