ಸಿರಗುಪ್ಪ ತಾಲೂಕಿನ ಬಲಕುಂದಿ ಗ್ರಾಮದಲ್ಲಿ ಆತ್ಮ ಯೋಜನೆ ಅಡಿ ಮಹಿಳಾ ಕಿಸಾನ್ ದಿವಸ ಕಾರ್ಯಕ್ರಮ ಉದ್ಘಾಟಿಸಲಾಯಿತು. ಸಹಾಯಕ ಕೃಷಿ ನಿರ್ದೇಶಕ ಎಸ್. ಬಿ. ಪಾಟೀಲ್, ಗ್ರಾಪಂ ಅಧ್ಯಕ್ಷೆ ಸುನಿತಾ ರುದ್ರಮುನಿ ಸ್ವಾಮಿ, ಆತ್ಮ ಯೋಜನೆಯ ಉಪ ಯೋಜನಾ ನಿರ್ದೇಶಕಿ ಕವಿತಾ ಕುಮಾರಿ ಇತರರಿದ್ದರು. 
ಜಿಲ್ಲೆ

ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಲ್ಲಿ ತೊಡಗಿ

ರುದ್ರಪ್ಪ ವಾಲಿ

ಸಿರಗುಪ್ಪ: ತಾಲೂಕಿನ ಬಲಕುಂದಿ ಗ್ರಾಮದಲ್ಲಿ ಬುಧವಾರ ಆತ್ಮ ಯೋಜನೆ ಅಡಿ ಮಹಿಳಾ ಕಿಸಾನ್ ದಿವಸ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗುಂಪು ಬಲ ವರ್ಧನೆ ಮತ್ತು ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಕೃಷಿ ಪರಿವರ್ತನೆಯಲ್ಲಿ ಉದ್ಯಮಶೀಲ ಮಹಿಳೆಯರ ಪಾತ್ರ ಶೀರ್ಷಿಕೆ ಅಡಿ ರೈತ ಮಹಿಳೆಯರಿಗೆ ಮಿಕ್ಸಡ್ ಫ್ರೂಟ್ ಜಾಮ್ ಮತ್ತು ಟೊ ಮ್ಯಾಟೊ ಕೆಚಪ್ ತಯಾರಿಕೆ ಪ್ರಾತ್ಯಕ್ಷಿಕೆ ನೀಡಲಾಯಿತು.

ಸಹಾಯಕ ಕೃಷಿ ನಿರ್ದೇಶಕ ಎಸ್. ಬಿ. ಪಾಟೀಲ್ ಮಾತನಾಡಿ, ಮಹಿಳೆಯರು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಲ್ಲಿ ತೊಡಗುವುದರಿಂದ ಅತ್ಯಂತ ಹೆಚ್ಚಿನ ಲಾಭಗಳಿಸಲು ಸಾಧ್ಯ ಎಂದರು. ವಿಷಯ ತಜ್ಞೆ ಸುಮಂಗಳ ಮಲ್ಲಿಕಾರ್ಜುನ ಮಿಕ್ಸಡ್ ಫ್ರೂಟ್ ಜಾಮ್ ಮತ್ತು ಕೆಚಪ್ ತಯಾರಿಕೆ ವಿಧಾನ ತಿಳಿಸಿದರು.

ತಾಲೂಕು ತಾಂತ್ರಿಕ ವ್ಯವಸ್ಥಾಪಕ ಹರೀಶ ನಾಯಕ್ ಹಾಗೂ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಸಾಯಿ ಚೇತನ್ ಇತರರಿದ್ದರು.