ಸೋಮವಾರಪೇಟೆ: ಕಕ್ಕೆಹೊಳೆ ಬಳಿಯಿರುವ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿನ ಶ್ರೀ ಭುವನೇಶ್ವರಿ ದೇವಿ ಸನ್ನಿಧಿಯಲ್ಲಿ ಆಟಿ ಮಾಸದ ಪ್ರಯುಕ್ತ ಗುರುವಾರ ಸಂಜೆ ಶತ್ರು ಸಂಹಾರ ಪೂಜೆ ನೆರವೇರಿತು.
ದೇವಾಲಯದ ಅರ್ಚಕರಾದ ಮಣಿಕಂಠ ನಂಬೂದರಿ, ಜಗದೀಶ್ ಉಡುಪ, ಹಾನಗಲ್ಲು ಪ್ರಸಾದ್, ವಾದಿರಾಜ್, ವೆಂಕಟೇಶ ಅಯ್ಯರ್ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿತು. ಮಹಾಮಂಗಳಾರತಿ ಬಳಿಕ ಎಲ್ಲರಿಗೂ ಅನ್ನಸಂತರ್ಪಣೆ ನೆರವೇರಿತು.