ಜಿಲ್ಲೆ

ದತ್ತಿ ನಿಧಿ ಕಾರ್ಯಕ್ರಮ

ಗಿರೀಶ ಸಗರ

ವಿಜಯಪುರ : ನಗರದ ಹಳೇ ತಹಸೀಲ್ದಾರ್​ ಕಚೇರಿ ಬಳಿಯ ಕಸಾಪ ಸಭಾಂಗಣದಲ್ಲಿ ಜೂ. 15 ರಂದು ಬೆಳಗ್ಗೆ 11 ಗಂಟೆಗೆ ದತ್ತಿನಿಧಿ ಕಾರ್ಯಕ್ರಮ ನಡೆಯಲಿದೆ.

ಜಿ.ಪಂ. ಮಾಜಿ ಸದಸ್ಯ ಪಂಚಪ್ಪ ಕಲಬುರ್ಗಿ ಕಾರ್ಯಕ್ರಮ ಉದ್ಘಾಟಿಸುವರು. ಶಿವಶರಣೆ ನೆಲ್ಲೂರ ನಿಂಬೆಕ್ಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್​.ಡಿ. ಕುಮಾನಿ ಅಧ್ಯಕ್ಷತೆ ವಹಿಸುವರು. ಸಾಹಿತಿ ಬಸವರಾಜ ಕುಂಬಾರ ಹಾಗೂ ಶರಣ ಚಿಂತಕ ಎಂ.ಬಿ. ಕಟ್ಟಿಮನಿ ಉಪನ್ಯಾಸ ನೀಡುವರು. ನಳಂದಾ ಪ.ಪೂ. ಕಾಲೇಜಿನ ಪ್ರಾಚಾಯೆರ್ ಹೇಮಾವತಿ ಪಾಟೀಲ, ಟಿ.ಆರ್​. ಹಾವಿನಾಳ, ಬಸವರಾಜ ಜಾಲಗೇರಿ, ಬೀರಪ್ಪ ಜುಮನಾಳ, ಸುನಂದಾ ಯಂಪೂರೆ, ಗುರುದೇವ ಅಂಬಲಿ ಹಾಗೂ ಸಿದ್ರಾಮಪ್ಪ ಅಂಬಲಿ ಉಪಸ್ಥಿತಿ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.