ಉಳ್ಳಾಲ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಈಶ್ವರ್ ಉದ್ಘಾಟಿಸಿದರು. ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಸದಾಶಿವ ಉಳ್ಳಾಲ್, ಇಸಿಒ ಅನ್ನಪೂರ್ಣಾ, ಬಿಆರ್‌ಪಿಗಳಾದ ಸುಶ್ಮಾ, ತಹಸಿನ್, ಸವಿತಾ, ಸಿಆರ್‌ಪಿಗಳಾದ ಹರೀಶ್ ಕುಮಾರ್, ಮೋಹನ್, ರೆಹನಾ, ಗೀತಾ ಮತ್ತಿತರರು ಹಾಜರಿದ್ದರು. 
ಜಿಲ್ಲೆ

ಅಂಕದೊಂದಿಗೆ ಪ್ರತಿಭೆಗೂ ಪ್ರೋತ್ಸಾಹ, ಪ್ರತಿಭಾ ಕಾರಂಜಿ ಉದ್ಘಾಟಿಸಿ ಎಚ್.ಆರ್.ಈಶ್ವರ್ ಅಭಿಪ್ರಾಯ

ಉಳ್ಳಾಲ: ಮಕ್ಕಳನ್ನು ಅಂಕಗಳಿಗೆ ಮಾತ್ರ ಸೀಮಿತಗೊಳಿಸದೆ, ಪ್ರತಿಭೆಗೆ ಪ್ರೋತ್ಸಾಹ ನೀಡಿ ಅದನ್ನು ಹೊರಸೆಳೆಯುವುದು ಆದ್ಯ ಕರ್ತವ್ಯವಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್ ಹೇಳಿದರು.

ದ.ಕ. ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ-ಸಮಗ್ರ ಶಿಕ್ಷಣ ಕರ್ನಾಟಕ, ದ.ಕ. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ದಕ್ಷಿಣ ವಲಯ, ಸಮೂಹ ಸಂಪನ್ಮೂಲ ಕೇಂದ್ರ ಉಳ್ಳಾಲ ಮತ್ತು ಹಳೆಕೋಟೆ ಅನುದಾನಿತ ಸಯ್ಯದ್ ಮದನಿ ಕಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಮಂಗಳವಾರ ಉಳ್ಳಾಲ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಡಾ.ಪ್ರಶಾಂತ್ ಕುಮಾರ್, ಇಸಿಒ ಅನ್ನಪೂರ್ಣಾ, ಬಿಆರ್‌ಪಿಗಳಾದ ಸುಷ್ಮಾ, ತಹಸಿನ್, ಸವಿತಾ, ಸಿಆರ್‌ಪಿಗಳಾದ ಹರೀಶ್ ಕುಮಾರ್, ಮೋಹನ್, ರೆಹನಾ, ಗೀತಾ, ಕುಮುದಿನಿ, ದರ್ಗಾ ಸಮಿತಿ ಲೆಕ್ಕಪರಿಶೋಧಕ ಫಾರೂಕ್, ಉಳ್ಳಾಲ ಬಿ.ಎಂ. ಶಾಲೆಯ ಮುಖ್ಯಶಿಕ್ಷಕಿ ಜಯವಂತಿ ಸೋನ್ಸ್, ನಿವೃತ್ತ ಶಿಕ್ಷಕ ಬಿ.ಎಂ.ತುಂಬೆ, ಸಂತ ಸಬಾಸ್ಟಿಯನ್ ಶಾಲೆ ಮುಖ್ಯಶಿಕ್ಷಕ ಸಿರಿಲ್, ಕೋಟೆಪುರ ಟಿಪ್ಪು ಸುಲ್ತಾನ್ ಶಾಲೆ ನಿವೃತ್ತ ಮುಖ್ಯಶಿಕ್ಷಕ ಎಂ.ಎಚ್.ಮಲಾರ್, ಮುಖ್ಯಶಿಕ್ಷಕಿ ಗೀತಾ ಶೆಟ್ಟಿ, ಕಲ್ಲಾಪು ಹಜ್ರತ್ ಆಂಗ್ಲಮಾಧ್ಯಮ ಶಾಲೆ ಮುಖ್ಯಶಿಕ್ಷಕಿ ನಸೀಮಾ, ಅಳೇಕಲ ಹಜ್ರತ್ ಆಂಗ್ಲಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ರಮ್ಲತ್ ಬಾನು, ಮುಖ್ಯಶಿಕ್ಷಕ ಇಂತಿಯಾಜ್, ಭಾರತ್ ಶಾಲೆಯ ಮುಖ್ಯಶಿಕ್ಷಕಿ ವಿನಯಕುಮಾರಿ, ಹಳೆಕೋಟೆ ಶಾಲಾ ಕಾರ್ಯದರ್ಶಿ ಅಲ್ತಾಫ್ ಯು.ಎಚ್, ಉಪಾಧ್ಯಕ್ಷ ಯು.ಎನ್.ಇಬ್ರಾಹಿಂ, ಹಿರಿಯರಾದ ಜೈನುದ್ದೀನ್, ಯು.ಕೆ ಬಾವ, ಎಂ.ಎಚ್.ಇಬ್ರಾಹಿಂ, ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ರಫೀಕ್ ಹಳೆಕೋಟೆ ಮೊದಲಾದವರು ಉಪಸ್ಥಿತರಿದ್ದರು.

ಕ್ಷೇತ್ರ ಸಮನ್ವಯಾಧಿಕಾರಿ ಡಾ.ಪ್ರಶಾಂತ್ ಕುಮಾರ್ ಮತ್ತು ಸಾಂಸ್ಕೃತಿಕ, ಕ್ರೀಡಾಲೋಕದ ಸಾಧನೆಗಾಗಿ ಹಲೀಮಾ ಸುಹಾನ ಅವರನ್ನು ಸನ್ಮಾನಿಸಲಾಯಿತು. ಹಳೆಕೋಟೆ ಶಾಲೆಯ ಮುಖ್ಯಶಿಕ್ಷಕ ಕೆಎಂಕೆ ಮಂಜನಾಡಿ ಪ್ರಾಸ್ತಾವಿಕ ಮಾತನಾಡಿದರು. ಕೋಟೆಪುರ ಶಾಲೆಯ ಚಿತ್ರಕಲಾ ಶಿಕ್ಷಕ ರಫೀಕ್ ಕಾರ್ಯಕ್ರಮ ನಿರೂಪಿಸಿದರು.

ಶಿಕ್ಷಕರ, ಹೆತ್ತವರ ಸಹಕಾರ

ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಸದಾಶಿವ ಉಳ್ಳಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರಂಭದಲ್ಲಿ ಓದಿನಲ್ಲಿ ಹಿಂದುಳಿದ ಮಕ್ಕಳು ಮುಂದೆ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ಅಂಕ ಪಡೆದು ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಾರೆ. ಇದಕ್ಕೆ ಶಿಕ್ಷಕರ ಮತ್ತು ಹೆತ್ತವರ ಪ್ರೋತ್ಸಾಹ ಅಗತ್ಯ ಎಂದರು.