ಜಿಲ್ಲೆ

ಆರ್ಯವೈಶ್ಯ ಪ್ರತಿಭೆಗಳ ಪ್ರೋತ್ಸಾಹ ಅವಶ್ಯ: ಸುಧೀಂದ್ರ|Encouragement of Arya Vaishya talents is necessary

ಬೆಂಗಳೂರು: ದೇಶದ ವಿವಿಧ ರಾಜ್ಯಗಳಲ್ಲಿ ಹರಿದು ಹಂಚಿ ಹೋಗಿರುವ ಆರ್ಯವೈಶ್ಯ ಸಮಾಜವನ್ನು ಸಂಘಟಿಸಿ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯ(Encouragement of Arya Vaishya talents is necessary) ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಈ .ಸುಧೀಂದ್ರ(S E Sudheendra) ತಿಳಿಸಿದರು.

ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ಆಯೋಜಿಸಿದ್ದ ಪ್ರತಿಭೋತ್ಸವ ಹಾಗೂ ಪ್ರತಿಭೋತ್ಸವ ಶೋಭಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಸಮಾಜದ ಪ್ರತಿಭೆಗಳನ್ನು ಹುಡುಕಿ ಈ ಕಾರ್ಯಕ್ರಮದಲ್ಲಿ ಸನ್ಮಾನಿಸುತ್ತಿರುವುದು ಪ್ರತಿಭೋತ್ಸವ ಎಂಬುದಕ್ಕೆ ಅರ್ಥಪೂರ್ಣವಾಗಿದೆ ಎಂದು ಶ್ಲಾಘಿಸಿದರು.

ಸರ್ಕಾರದಿಂದ ನಮ್ಮ ಸಮಾಜಕ್ಕೆ ಆಗಬೇಕಾಗಿರುವ ಕೆಲಸಗಳನ್ನು ತಮ್ಮೆಲ್ಲರ ಜೊತೆಗೂಡಿ ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಸಂಸದ ಯದುವೀರ್ ಶ್ರೀಕಂಠದತ್ತ ಚಾಮರಾಜ ಒಡೆಯರ್, ಮಾಜಿ ಸಚಿವ ಡಾ. ಸಿ. ಎನ್.ಅಶ್ವತ್ಥ ನಾರಾಯಣ, ಎಂಎಲ್‌ಸಿ ಡಿ.ಎಸ್. ಅರುಣ್, ಡಾ.ಬಿ .ಎನ್. ಗೋವಿಂದರಾಜುಲು, ಬಿ.ಎಸ್.ರಘುವೀರ್, ಡಾ. ಕೆ.ಪಿ. ಪುತ್ತೂರಾಯ, ಆರ್.ಪಿ. ರವಿಶಂಕರ್ ಹಾಗೂ ಮಹಾಸಭಾದ ಆಡಳಿತ ಮಂಡಳಿ ಪದಾಧಿಕಾರಿಗಳು ಭಾಗವಹಿಸಿದ್ದರು.