ಜಿಲ್ಲೆ

ವಿದ್ಯಾರ್ಥಿಗಳ ಸಂಶೋಧನೆಗೆ ಪ್ರೋತ್ಸಾಹ ಸಿಗಲಿ

ಮರಿದೇವ ಹೂಗಾರ

ಹುಬ್ಬಳ್ಳಿ: ಕೆಎಲ್‌ಇ ಔಷಧ ವಿಜ್ಞಾನ ಮಹಾವಿದ್ಯಾಲಯದ ಫಾರ್ಮಕಾಗ್ನೋಸಿ ವಿಭಾಗ ಮತ್ತು ಬೆಳಗಾವಿಯ ಯುಡಿಇಎಚ್‌ಪಿ ಕೆಎಲ್‌ಇ ಅಕಾಡೆಮಿಯ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಹಯೋಗದಲ್ಲಿ ಇಲ್ಲಿಯ ಮಹಾವಿದ್ಯಾಲಯದಲ್ಲಿ ಕಾಪಿಟೆನ್ಸಿ ಬೇಸ್ಡ್ ಎಜುಕೇಷನ್ ಎಂಬ ವಿಷಯದ ಮೇಲೆ ಇತ್ತೀಚೆಗೆ ಎರಡು ದಿನದ ಕಾರ್ಯಾಗಾರ ಏರ್ಪಡಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿ ಡಾ.ಎಚ್. ರಾಜೇಂದ್ರ ಪ್ರಸಾದ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆಯ ಕೌಶಲ ಮತ್ತು ವಿವಿಧ ಸಂಶೋಧನೆ ಬಗೆಗೆ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ವಹಿಸಬೇಕು. ಬೋಧಕರು ಕೂಡ ಪ್ರೋತ್ಸಾಹಿಸಬೇಕು. ಜಾಗತಿಕ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ಕೊಡಿಸುವತ್ತ ದೃಷ್ಟಿ ಹರಿಸಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಡಾ.ಎ.ಎಚ್.ಎಂ. ವಿಶ್ವನಾಥ ಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಆವಿಷ್ಕಾರ ಮತ್ತು ಉದ್ಯಮಶೀಲತೆ ಉತ್ತೇಜಿಸಲು ವಿದ್ಯಾರ್ಥಿಗಳು ಅನುಸರಿಸಬೇಕಾದ ಕ್ರಮ ಮತ್ತು ತರೆಬೇತಿ ಬಗ್ಗೆ ಮಾತನಾಡಿದರು.

ಫಾರ್ಮಕಾಗ್ನೋಸಿ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೆ.ಪಿ. ಅವರು ಕೆಎಲ್‌ಇ ವಿಶ್ವವಿದ್ಯಾಲಯದ ಸಾಂಸ್ಥಿಕ ಆವಿಷ್ಕಾರ ಮಂಡಳಿ ಹಮ್ಮಿಕೊಳ್ಳುವ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಪ್ರೊ. ಅಶ್ವೀಣಿ ಎನ್., ಪ್ರೊ. ರವಿ.ಕುಲಕರ್ಣಿ, ಡಾ. ಗುರುರಾಜ ಪಾಟೀಲ್, ಬಿ.ಎಂ. ಕಡೆತೋಟದ್ ಸಂಪನ್ಮೂಲ ವ್ಯಕಿಗಳಾಗಿ ಆಗಮಿಸಿದ್ದರು.

ಡಾ.ಕೆ.ಎಸ್.ಅಕ್ಕಿ, ಡಾ.ಎಚ್.ಎನ್. ಶೋಲಾಪುರ್ ಕಾರ್ಯಕ್ರಮ ನಡೆಸಿಕೊಟ್ಟರು.

ರಾಜ್ಯದ ವಿವಿಧ ಮಹಾವಿದ್ಯಾಲಯಗಳಿಂದ ಸುಮಾರು 45 ಪ್ರಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.