ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಪ್ರಿಯದರ್ಶಿನಿ ಕಾಲನಿಯ ಎನ್.ಎಲ್.ಇ. ಸೊಸೈಟಿಯ ಡಾ.ಆರ್.ಬಿ. ಪಾಟೀಲ ಮಹೇಶ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ 9ಮತ್ತು 10ನೇ ನೇ ತರಗತಿ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ (ವಾರಿಧಿ-4.0) ಕಾರ್ಯಕ್ರಮವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಕಾಲೇಜಿನ ಜಂಟಿ ಕಾರ್ಯದರ್ಶಿ ಡಾ.ಬಿ.ಆರ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಡಗಿರುವ ಸೂಕ್ತ ಪ್ರತಿಭೆ ಅನಾವರಣಕ್ಕೆ ಇಂಥ ಕಾರ್ಯಕ್ರಮಗಳು ಅಗತ್ಯ. ಶಿಕ್ಷಕರು ಕೂಡ ಮಕ್ಕಳ ಪ್ರತಿಭೆ ಹೊರಹಾಕಲು ಪ್ರೇರಣೆ ನೀಡಬೇಕು ಎಂದರು.
ರೋಟರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಜಂಟಿ ಕಾರ್ಯದರ್ಶಿ ಶಿವರಾಮ ಹೆಗಡೆ ಅವರು ವೀರಾಗ್ರಣಿ ಪ್ರಶಸ್ತಿ ಅನಾವರಣಗೊಳಿಸಿದರು.
ಪ್ರಾಚಾರ್ಯ ರಾಮ ಮೋಹನ್ ಎಚ್.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಹುಬ್ಬಳ್ಳಿ ಶಹರ ಹಾಗೂ ಸುತ್ತಮುತ್ತಲಿನ 30ಕ್ಕೂ ಹೆಚ್ಚಿನ ಶಾಲೆಗಳಿಂದ 400ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.
ಎನ್.ಎಲ್.ಇ. ಸಂಸ್ಥೆಯ ಸದಸ್ಯ ಕೌಜಲಗಿ, ಉಪಪ್ರಾಚಾರ್ಯ ರಮೇಶ ಹೊಂಬಾಳೆ, ಸಾಂಸ್ಕೃತಿಕ ಕಾರ್ಯಕ್ರಮಗಳ ವಿಭಾಗದ ಮುಖ್ಯಸ್ಥ ನೀಲ್ ಪ್ರತಾಪನ್ ಇತರರು ಭಾಗವಹಿಸಿದ್ದರು. ಉಪನ್ಯಾಸಕಿ ಶಿಬಾನಿ ಕೆ. ಸ್ವಾಗತಿಸಿದರು. ಶ್ರೇಯಾ ಇಂಗಳೆ ಮತ್ತು ನಿಧಾ ನಿರೂಪಿಸಿದರು. ಮೋಹನ್ ಇರಕಲ್ ವಂದಿಸಿದರು.