ಜಿಲ್ಲೆ

ಮಕ್ಕಳಿಗೆ ಒತ್ತಡ ಹೇರದೆ ಕಲಿಯಲು ಪ್ರೋತ್ಸಾಹಿಸಿ

ಪ್ರಸಿನ್ ಕೆ.ಆರ್

ಹೊಳೆನರಸೀಪುರ: ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಪರಿಣಾಮ ಬೀರುತ್ತದೆ ಎಂದು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಮಂಜುರಾಜ್ ಹೇಳಿದರು.

ಪಟ್ಟಣದ ಕೋನೇರಿ ರಾಮಶೆಟ್ಟರ ಛತ್ರದಲ್ಲಿ ಗುರುಗಣೇಶ್ ಚಿಟ್ಸ್ ಫಂಡ್ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಾಲಕರು ಮಕ್ಕಳಿಗೆ ಒತ್ತಡ ಹೇರದೆ ಅವರ ಆಸಕ್ತಿ ವಿಷಯದಲ್ಲಿ ಕಲಿಯಲು ಪ್ರೋತ್ಸಾಹಿಸಬೇಕೆಂದರು.

ಸಾಮಾಜಿಕ ಮಾಧ್ಯಮಗಳನ್ನು ಕಲಿಕೆಗೆ ಪೂರಕವಾಗಿ ಬಳಕೆಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ 31 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಚಿಟ್ಸ್ ಫಂಡ್ ವ್ಯವಸ್ಥಾಪಕ ನಿರ್ದೇಶಕ ಎಚ್.ವಿ.ಸುರೇಶ್‌ಕುಮಾರ್ ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ.ವೆಂಕಟೇಶ್, ಎಚ್.ಎಸ್.ಸುದರ್ಶನ್ ಇತರರಿದ್ದರು.