ಜಿಲ್ಲೆ

ಮಕ್ಕಳ ಆಸಕ್ತಿ ಕ್ಷೇತ್ರದಲ್ಲೇ ಮುಂದುವರಿಯಲು ಪ್ರೋತ್ಸಾಹಿಸಿ

ಹೊನ್ನಾವರ: ಮಕ್ಕಳಿಗೆ ಆಸಕ್ತಿ ಇರುವ ರಂಗದಲ್ಲಿ ಅವರನ್ನು ಮುಂದುವರಿಯಲು ಪಾಲಕರು ಪ್ರೋತ್ಸಾಹ ನೀಡಬೇಕು ಎಂದು ಜೆಡಿಎಸ್ ಧುರೀಣ ಸೂರಜ್ ನಾಯ್ಕ ಸೋನಿ ಹೇಳಿದರು.

ತಾಲೂಕಿನ ಸಾಲ್ಕೋಡ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾಲ್ಕೋಡದ ಗೆಳೆಯರ ಬಳಗ ಆಯೋಜಿಸಿದ ತೃತೀಯ ವರ್ಷದ ಜಿಲ್ಲಾ ಮಟ್ಟದ ಕೌಂಟಿ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡಾಂಗಣ ಉದ್ಘಾಟಿಸಿದ ಕಾಂಗ್ರೆಸ್ ಮುಖಂಡ ಮಂಜುನಾಥ ನಾಯ್ಕ ಮಾತನಾಡಿ, ಕ್ರೀಡೆಯು ದೈಹಿಕವಾಗಿ ಸದೃಢಗೊಳಿಸುವ ಜೊತೆಗೆ ಮನರಂಜನೆ ನೀಡುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷೆ ಯಮುನಾ ನಾಯ್ಕ ಮಾತನಾಡಿ, ಕ್ರಿಕೆಟ್ ಪಂದ್ಯಾವಳಿಯು ನಿರಂತರವಾಗಿ ನಡೆಯಬೇಕು ಎಂದರು. ಗ್ರಾಪಂ ಉಪಾಧ್ಯಕ್ಷ ಬಾಲಚಂದ್ರ ನಾಯ್ಕ, ಗ್ರಾಪಂ ಸದಸ್ಯ ಸಚಿನ ನಾಯ್ಕ, ಲಕ್ಷ್ಮೀ ಮುಕ್ರಿ, ಎಸ್​ಡಿಎಂಸಿ ಅಧ್ಯಕ್ಷ ಗಜಾನನ ನಾಯ್ಕ ಸಂಘಟನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಪಂ ಸದಸ್ಯ ಪಾತ್ರೋನ್ ಮೆಂಡಿಸ್, ಸಂಘಟನೆಯ ಅಧ್ಯಕ್ಷ ವಸಂತ ನಾಯ್ಕ, ಇತರರು ಉಪಸ್ಥಿತರಿದ್ದರು. ಶಿಕ್ಷಕರಾದ ಸತೀಶ ನಾಯ್ಕ ಸ್ವಾಗತಿಸಿದರು. ಗಣೇಶ ಭಾಗ್ವತ ಕಾರ್ಯಕ್ರಮ ನಿರ್ವಹಿಸಿದರು.