ಜಿಲ್ಲೆ

ಮಕ್ಕಳಿಗೆ ಪ್ರೋತ್ಸಾಹ ನೀಡಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಾಧನೆ ಎಂಬುದು ಸಾಧಕನ ಸ್ವತ್ತು. ನಿರ್ಣಾಯಕರು ಪಾರದರ್ಶಕವಾಗಿ ಸೂಕ್ತ ಪ್ರತಿಭೆ ಇರುವ ಮಕ್ಕಳನ್ನು ಆರಿಸಿ ಪ್ರೋತ್ಸಾಹ ನೀಡಬೇಕು. ಮಕ್ಕಳು ರಾಜ್ಯ, ರಾಷ್ಟ್ರ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುವಂತಾಗಬೇಕು ಎಂದು ಕ್ಷೇತ್ರ ಸಂಪನ್ಮೂಲ ಅಧಿಕಾರಿ ಮಂಜುನಾಥ ಅಡವೇರ ಹೇಳಿದರು.
ನಗರದ ವನಿತಾ ಸೇವಾ ಸಮಾಜದಲ್ಲಿ ಸಮೂಹ ಸಂಪನ್ಮೂಲ ಕೇಂದ್ರ ಹಾಗೂ ವನಿತಾ ಪ್ರೌಢ ಹಾಗೂ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಮದಾರಮಡ್ಡಿ ಕನ್ನಡ ಕ್ಲಸ್ಟರ್​ ಮಟ್ಟದ ಪ್ರತಿಭಾ ಕಾರಂಜಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರ ಶಿಣಾಧಿಕಾರಿ ಕಚೇರಿ ಇಸಿಒ ಶ್ರೀನಿವಾಸ ಸವಣೂರ, ಬಸವರಾಜ ಚಿಕ್ಕೂರ, ಪ್ರೌಢ ಶಾಲೆ ಮುಖ್ಯಾಧ್ಯಾಪಕ ಐ.ಎಚ್​. ಪೂಜಾರ, ಪಾರ್ವತಿ ಬಡಕುಂದ್ರಿ, ಸುಮಾ ರಜಪೂತ, ದೀಪಾ ಪಾಟೀಲ, ಇತರರು ಇದ್ದರು.
ಮದಾರಮಡ್ಡಿ ಕನ್ನಡ ಕ್ಲಸ್ಟರನ 27 ಶಾಲೆಗಳಿಂದ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರತಿಭಾ ಪಾಟೀಲ ಸ್ವಾಗತಿಸಿದರು. ಸವಿತಾ ವಿಭೂತಿ ನಿರೂಪಿಸಿದರು. ಬಸವರಾಜ ಜ್ಯೋತಿ ವಂದಿಸಿದರು.