ಜಿಲ್ಲೆ

ಕಲಾಸಕ್ತ ಮಕ್ಕಳಿಗೆ ಪ್ರೋತ್ಸಾಹ ನೀಡಿ

Gadag

ವಿಜಯವಾಣಿ ಸುದ್ದಿಜಾಲ ಮುಂಡರಗಿ

ಕಲೆ ಇರುವಲ್ಲಿ ಸುಂದರ ಭಾವನೆಗಳು ತುಂಬಿರುತ್ತವೆ. ಕಲಾಸಕ್ತಿ ಹೊಂದಿರುವ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ನಗರದ ಶ್ರೀಮಜ್ಜೂರೇಶ್ವರಿದೇವಿ ಜಾತ್ರಾ ಮಹೋತ್ಸವ ನಿಮಿತ್ತ ಗುರುವಾರ ರಾತ್ರಿ ಆಯೋಜಿಸಿದ್ದ ಹರಿಜನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪುರಸಭೆ ಸದಸ್ಯ ಪವನ ಮೇಟಿ ಮಾತನಾಡಿ, ವ್ಯಕ್ತಿತ್ವ ರೂಪಿಸುವಂತಹ ಗುಣಗಳನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಬದಲಾವಣೆ ಕಂಡು ಕೊಳ್ಳಬೇಕು. ಉತ್ತಮ ಶಿಕ್ಷಣವಂತರಾಗಿ ಜೀವನದಲ್ಲಿ ಬೆಳವಣಿಗೆಯಾದರೆ ಸಂವಿಧಾನ ರಚಿಸಿದ ಡಾ.ಅಂಬೇಡ್ಕರ್ ಕನಸು ನನಸಾಗುತ್ತದೆ ಎಂದರು.

ಜಿ.ಪಂ. ಮಾಜಿ ಸದಸ್ಯ ಹೇಮಗಿರೀಶ ಹಾವಿನಾಳ ಮಾತನಾಡಿದರು. ಹಂಪಿಯ ಮಾತಂಗ ಪರ್ವತದ ಶ್ರೀಪೂರ್ಣಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಸದಸ್ಯರಾದ ಪ್ರಲ್ಹಾದ ಹೊಸಮನಿ, ಸಂಜಯ್ ಚೌಡಾಳ ಮಾತನಾಡಿದರು. ಅಂಗವಿಕಲ ಬಾಲಕಿ ರೋಹಿಣಿ ಹಾಲಿನವರ ಕೃತಕ ಕಾಲಿನೊಂದಿಗೆ ಮಾಡಿದ ಭರತನಾಟ್ಯ ಪ್ರೇಕ್ಷಕರ ಮನಸೂರೆಗೊಂಡಿತು. ಅರುಣೋದಯ ಕಲಾತಂಡ, ಸ್ವರ್ಣಬಿಂದು ನೃತ್ಯ ಅಕಾಡೆಮಿ, ವಿವಿಧ ಕಲಾತಂಡದವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ರಾಮಚಂದ್ರ ಕಲಾಲ, ಕೊಟ್ರೇಶ ಅಂಗಡಿ, ಡಿ.ಡಿ. ಮೋರನಾಳ, ಧೃವಕುಮಾರ ಹೊಸಮನಿ, ಡಾ.ಬಿ.ಎಸ್.ಮೇಟಿ, ಎಸ್.ಡಿ. ಮಕಾಂದಾರ, ಲಕ್ಷ್ಮಣ ತಗಡಿನಮನಿ, ಟಿ.ಬಿ. ದಂಡಿನ, ಜ್ಯೋತಿ ಹಾನಗಲ್, ಶಿವಪ್ಪ ಚಿಕ್ಕಣ್ಣವರ, ನಾಗರಾಜ ಹೊಂಬಳಗಟ್ಟಿ, ರಫೀಕ್ ಮುಲ್ಲಾ, ರಾಜಾಬಕ್ಷ್ಮಿ ಬೆಟಗೇರಿ, ಪರಶುರಾಮ ಸುಣ್ಣಗಾರ, ಪ್ರಕಾಶ ಹಲವಾಗಲಿ ಉಪಸ್ಥಿತರಿದ್ದರು. ಪುರಸಭೆ ಸದಸ್ಯ ಸಂತೋಷ ಹಿರೇಮನಿ ಸ್ವಾಗತಿಸಿದರು. ಶಿಕ್ಷಕ ವಿಶ್ವನಾಥ ಉಳ್ಳಾಗಡ್ಡಿ ಕಾರ್ಯಕ್ರಮ ನಿರೂಪಿಸಿದರು.