ಜಿಲ್ಲೆ

ಎನ್ ಕೌಂಟರ್ ಪ್ರಕರಣ ತನಿಖೆಯಾಗಲಿ

ರುದ್ರಪ್ಪ ವಾಲಿ

ಸಿಂಧನೂರು: ಇತ್ತೀಚೆಗೆ ಕರ್ನಾಟಕ ಪೊಲೀಸ್ ನಡೆಸಿದ ವಿಕ್ರಮ್‌ಗೌಡ ಎನ್‌ಕೌಂಟರ್‌ನ್ನು ಸಿಪಿಐಎಂಎಲ್ ಲಿಬರೇಷನ್ ರಾಯಚೂರು ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಘಟಕದ ಕಾರ್ಯದರ್ಶಿ ನಾಗರಾಜ ಪೂಜಾರ್ ತಿಳಿಸಿದ್ದಾರೆ.

ಈ ಕುರಿತು ಶನಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಎನ್‌ಕೌಂಟರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಸರ್ಕಾರದ ಈ ಕೃತ್ಯ ಸಂವಿಧಾನಿಕ ತತ್ವಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಸಂವಿಧಾನ ಅನುಸರಿಸಿ ಮಾನವ ಹಕ್ಕುಗಳನ್ನು ಹೇಗೆ ಕಾಪಾಡುವುದು ಎಂಬುವುದನ್ನು ಅರಿತುಕೊಳ್ಳಬೇಕಾದ ಅವಶ್ಯಕೆ ಇದೆ.

ಈ ರಾಜಕೀಯ ವಿರೋಧವನ್ನು ಕೇವಲ ಅಪರಾಧ ಚಟುವಟಿಕೆ ಎಂದು ಗುರುತಿಸಿ ಅದನ್ನು ಬಂದೂಕಿನಿಂದ ನಾಶಪಡಿಸಲು ಪ್ರಯತ್ನಿಸಿದನ್ನು ಬಿಟ್ಟು, ಸರ್ಕಾರಗಳು ಕ್ಷೇತ್ರದ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳು ಮುಂತಾದ ಸಮಸ್ಯೆಗಳನ್ನು ಪರಿಹರಿಸಬೇಕು.

ಹೋರಾಟಗಳನ್ನು ಅಪರಾಧಗೊಳಿಸುವ ಬದಲು, ರಾಜ್ಯವು ಸಮರ್ಥವಾಗಿ ಜನರ ಸಮಸ್ಯೆಗಳ ಕುರಿತು ಸೂಕ್ತ ಪರಿಹಾರಗಳನ್ನು ನೀಡಬೇಕು ಮತು ಸಂವಿಧಾನವನ್ನು ಪಾಲಿಸಬೇಕು. ರಾಜ್ಯ ಸರ್ಕಾರವು ವಿಕ್ರಮ್ ಗೌಡನ ಹತ್ಯೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ದುರಂತದ ವಿಚಾರ. ಬದಲಿಗೆ ಸರ್ಕಾರ ಸುಪ್ರೀಂ ಕೋರ್ಟ್‌ನ 2014 ತೀರ್ಪನ್ನು ರಾಷ್ಟ್ರೀಯ ಮಾನವ ಹಕ್ಕು ನಿಬರ್ಂಧನೆಗಳನ್ನು ಪಾಲಿಸಿ, ಎನ್‌ಕೌಂಟರ್‌ನಲ್ಲಿ ಭಾಗಿಯಾದವರ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಬೇಕು. ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಪ್ರಕಾರ ವಿಕ್ರಂ ಎನ್ ಕೌಂಟರ್ ಪ್ರಕರಣ ಸಮಗ್ರ ಸ್ವತಂತ್ರ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದ್ದಾರೆ.