ಜಿಲ್ಲೆ

ಖಾಲಿ ಗಾಡಾ ಓಡಿಸುವ ಸ್ಪರ್ಧೆ ಏ. 6ರಂದು

ಮರಿದೇವ ಹೂಗಾರ

ಹುಬ್ಬಳ್ಳಿ: ಉಣಕಲ್ ಹೊಸಮಠದ ಶ್ರೀ ಸದ್ಗುರು ಸಿದ್ಧೇಶ್ವರ ಸ್ವಾಮಿಗಳ ಪುಣ್ಯಾರಾಧನೆ ಮಹೋತ್ಸವ ನಿಮಿತ್ತ ರೈತರಿಗಾಗಿ ರಾಜ್ಯ ಮಟ್ಟದ ಭಾರಿ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಏ. 6ರಂದು ಬೆಳಗ್ಗೆ 6ಕ್ಕೆ ಇಲ್ಲಿಯ ಹೆಬ್ಬಳ್ಳಿ ರಸ್ತೆಯ ಶ್ರೀ ಸಾಂಗ್ಲಿ ಗಣೇಶ ಗುಡಿ ಹತ್ತಿರ ಇರುವ ಕಳಕವ್ವ ಸಜ್ಜನರ, ಯಲ್ಲಪ್ಪ ಕಡಪಟ್ಟಿ , ಕೃಷ್ಣಾಜಿ ದೀಕ್ಷಿತ್ ಅವರ ಹೊಲದಲ್ಲಿ ಏರ್ಪಡಿಸಲಾಗಿದೆ.

ಗೆದ್ದವರಿಗೆ ಬೈಕ್, ಬಂಗಾರ, ನಗದು ಹಾಗೂ ಆಕರ್ಷಕ ಬಹುಮಾನ ಪ್ರಕಟಿಸಲಾಗಿದೆ. ಕರಪತ್ರಗಳನ್ನು ತೋಂಟದಾರ್ಯಮಠ ಮುಂಡರಗಿ ಹಾಗೂ ನಿಷ್ಕಲ ಮಂಟಪ ಬೈಲೂರಿನ ಶ್ರೀ ನಿಜಗುಣ ಪ್ರಭು ಸ್ವಾಮೀಜಿ ಮಂಗಳವಾರ ಬಿಡುಗೊಳಿಸಿದ್ದಾರೆ. ಶ್ರೀ ಸದ್ಗುರು ಸಿದ್ಧೇಶ್ವರ ಸ್ವಾಮಿಗಳವರ ಹೊಸಮಠದ ಟ್ರಸ್ಟ್ ಕಮಿಟಿ ಚೇರ್ಮನ್ ರಾಜಣ್ಣ ಕೊರವಿ, ಪದಾಧಿಕಾರಿಗಳಾದ ರಾಮಣ್ಣ ಪದ್ಮಣ್ಣವರ, ಗುರುಸಿದ್ದಪ್ಪ ಬೆಂಗೇರಿ, ಶಿವಾಜಿ ಕನ್ನಿಕೊಪ್ಪ, ಗುರುಸಿದ್ದಪ್ಪ ಮೆಣಸಿನಕಾಯಿ ಇತರರು ಇದ್ದರು.