ಜಿಲ್ಲೆ

ಜೀವನ ಕೌಶಲದಿಂದ ಸಾಮರ್ಥ್ಯ ವೃದ್ಧಿ

Avinash R

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ (ಡಿಇಎಲ್‌ಇಡಿ) ಸಂಸ್ಥೆಯಲ್ಲಿ ಜೀವನ ಕೌಶಲ ಕಾರ್ಯಾಗಾರ ನಡೆಯಿತು.

ಎಸ್.ಡಿ.ಎಂ.ಸನಿವಾಸ ಕಾಲೇಜಿನ ಪ್ರಾಂಶುಪಾಲ ಸುನೀಲ್ ಪಂಡಿತ್ ಮಾತನಾಡಿ, ಜೀವನ ಕೌಶಲ ಮಾನವನ ಜೀವನದಲ್ಲಿ ಅತ್ಯಂತ ಮಹತ್ವದ್ದಾಗಿರುತ್ತವೆ. ಅವು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುವುದರೊಂದಿಗೆ ಸಂಬಂಧಗಳನ್ನು ಬೆಳೆಸುತ್ತವೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ನೀಡುತ್ತವೆ. ಹೀಗಾಗಿ ಶಿಕ್ಷಕರು ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ಮಕ್ಕಳಿಗೆ ಮಾದರಿಯಾಗಬೇಕು ಎಂದರು.

ಪ್ರಾಂಶುಪಾಲ ಸ್ವಾಮಿ ಕೆ.ಎ.ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನ ಕೌಶಲ ಅಥವಾ ಮಾನಸಿಕ ಸಾಮರ್ಥ್ಯದ ಸಹಾಯದಿಂದ ಕಷ್ಟಕರವಾದ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಕಲಿಯಬಹುದು ಎಂದರು.

ವಿದ್ಯಾರ್ಥಿಗಳಿಗೆ ಕಾರ್ಯಾಗಾರದಲ್ಲಿ ಹಲವಾರು ಪ್ರಾಯೋಗಿಕ ಚಟುವಟಿಕೆಗಳನ್ನು ಮಾಡಿಸಲಾಯಿತು. ಉಪನ್ಯಾಸಕರಾದ ಮಂಜು ಆರ್., ಪ್ರಿಯದರ್ಶಿನಿ. ಸಿಬ್ಬಂದಿ ವರ್ಗದವರು ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿಗಳಾದ ಅನುಷಾ ಸ್ವಾಗತಿಸಿ, ಮುಝೈನಾ ವಂದಿಸಿ, ಫಾತಿಮಾ ನಿರೂಪಿಸಿದರು.