IW Club 
ಜಿಲ್ಲೆ

ಮಹಿಳೆಯರ ಸಬಲೀಕರಣದಿಂದ ಸ್ವಾವಲಂಬಿ ಜೀವನ ಸಾಧ್ಯ

ಬೈಂದೂರು: ಮಹಿಳೆಯರ ಸಬಲೀಕರಣದಿಂದ ಸ್ವಾವಲಂಬಿ ಜೀವನ ಸಾಧ್ಯ. ಸಮಾಜಮುಖಿ ವ್ಯಕ್ತಿತ್ವದೊಂದಿಗೆ ಮಾನವೀಯ ಗುಣದಿಂದ ಸಂಸ್ಕೃತಿ ರಕ್ಷಣೆ ಮಾಡಬಹುದು. ಮಹಿಳೆಯರು ಸಮಾಜ ಸೇವೆ ಮಾಡುವುದರ ಮೂಲಕ ಸಮಷ್ಟಿಯ ಹಿತ ಕಾಪಾಡುವ ಜವಾಬ್ದಾರಿಯ ಜ್ಞಾನ ಬೆಳೆಯುತ್ತದೆ ಎಂದು ಗಂಗೊಳ್ಳಿ ಎಸ್.ವಿ. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸುಗುಣಾ ಹೇಳಿದರು.

ಬೈಂದೂರು ರೋಟರಿ ಸಮುದಾಯ ಭವನದಲ್ಲಿ ಇನ್ನರ್‌ವ್ಹೀಲ್ ಕ್ಲಬ್‌ನ 2025-26ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪದಪ್ರದಾನಿಸಿ ಮಾತನಾಡಿದರು.

ಸಂಘಟಿತರಾಗಿ ಬಾಳುವುದರಿಂದ ಸಮಾಜದ ಏಳಿಗೆ ಸಾಧಿಸಬಹುದು. ಈ ನಿಟ್ಟಿನಲ್ಲಿ ಮಹಿಳೆಯರು ಸಂಘಟಿತರಾಗುವ ಮೂಲಕ ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ನಿಕಟ ಪೂರ್ವಾಧ್ಯಕ್ಷೆ ಗುಲಾಬಿ ಮರುವಂತೆ ನೂತನ ಅಧ್ಯಕ್ಷೆ ಶಾರದಾ ಕೆ. ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಕಾರ್ಯದರ್ಶಿ ಚೈತ್ರಾ ಸತೀಶ್ ವರದಿ ಮಂಡಿಸಿದರು. ಉಪಾಧ್ಯಕ್ಷೆ ಭಾನುಮತಿ ಬಿ.ಕೆ. ವಂದಿಸಿದರು. ಜ್ಯೋತಿ ಎಚ್., ರಾಜೀವಿ ಗೋವಿಂದ ಕಾರ್ಯಕ್ರಮ ನಿರ್ವಹಿಸಿದರು.