ಜಿಲ್ಲೆ

ಆಳಂದ; ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿ

ಆಳಂದ: ಸಹಕಾರಿ ರಂಗಗಳು ಕೇವಲ ಲಾಭದ ಉz್ದೆÃಶಕ್ಕಾಗಿ ಕೆಲಸ ಮಾಡದೆ, ರೈತರು ಹಾಗೂ ಜನ ಸಾಮಾನ್ಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಕಾರ್ಯ ಮಾಡಬೇಕಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಜಿ.ನಂಜನಗೌಡ ತಿಳಿಸಿದರು.

ಆರ್ಯ ಸಮಾಜದ ಮಂಗಲ ಕಾರ್ಯಾಲಯದಲ್ಲಿ ತಡಕಲ್‌ನ ಲಕ್ಷ್ಮೀ ವಿಕಾಸ ಸೌಹಾರ್ದ ಸಹಕಾರಿ ಸಂಘದ ಸ್ಟಾö್ಯಂಪ್-1ರಲ್ಲಿ ಪತ್ತಿನ ಸೇವೆ ಕಾರ್ಯಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಕಳೆದ 21 ವರ್ಷಗಳಿಂದ ರೈತರಿಗೆ ರಸಗೊಬ್ಬರ, ಕ್ರಿಮಿನಾಶಕ ಔಷಧ, ಪಹಣಿ ಸೇರಿ ಇತರೆ ಸೇವೆಗಳು ಸುಗಮವಾಗಿ ಸಿಗುವಂತೆ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಸೌಹಾರ್ದ ಸಹಕಾರಿಗಳು ಕೇವಲ ಸಾಲ ಕೊಡುವುದಕ್ಕಷ್ಟೆ ಸೀಮಿತವಾಗಿರಬಾರದು. ರೈತರ ಆದಾಯಕ್ಕೆ ತಕ್ಕಂತೆ ಸಾಲ ನೀಡಿ, ಸಾಲಮನ್ನಾದಂತಹ ಕಾರ್ಯಗಳು ನಿಗದಿತ ಸಮಯದಲ್ಲಿ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಸುಭಾಷ ಗುತ್ತೇದಾರ್ ಮಾತನಾಡಿ, ಸಹಕಾರಿ ಬ್ಯಾಂಕ್‌ಗಳು ಬೆಳೆಯಲು ನಿರ್ದೇಶಕರ ಸಹಕಾರ ಅಗತ್ಯ. ಗ್ರಾಮೀಣ ಭಾಗದಲ್ಲಿ ಹೆಚ್ಚೆಚ್ಚು ಸಹಕಾರಿ ಸಂಘಗಳು ಆರಂಭವಾಗಬೇಕು ಎಂದು ಹೇಳಿದರು.

ಶ್ರೀ ಸಿದ್ಧೇಶ್ವರ ಶಿವಾಚಾರ್ಯರು, ತಡಕಲ್‌ನ ಶ್ರೀ ಸಿದ್ಧಮಲ್ಲ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಗುರುನಾಥ ಜ್ಯಾಂತಿಕರ, ಮಹೇಶ ಪಾಟೀಲ್, ಮಹಾಂತಪ್ಪ ಆಲೂರೆ, ಮೇಲಗಿರೆಪ್ಪ ವಾಲೆ, ಬಸವರಾಜ ಸ್ವಾಮಿ, ಸಿದ್ರಾಮಪ್ಪ ಹರಸೂರ, ಅನೀಲ ಜಮಾದಾರ, ರಾಜಶ್ರೀ ಖಜೂರಿ, ಅಶೋಕ ಜಮಾದಾರ, ಶ್ರೀಮಂತ ನಾಮಣೆ, ವಿಜಯಕುಮಾರ ಕೋಥಳೀಕರ, ಶಂಕರ ಹರಳಯ್ಯ ಇತರರಿದ್ದರು. ಲಕ್ಷ್ಮೀಕಾಂತ ಕೋಡ್ಲೆ ಅಧ್ಯಕ್ಷತೆ ವಹಿಸಿದ್ದರು. ವಿಜಯಕುಮಾರ ಬೆಳ್ಳೆ ಸ್ವಾಗತಿಸಿದರು. ಎಂ.ಎಸ್.ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ನೀಲಕಂಠ ಶಿರೋಳ್ಳೆ ನಿರೂಪಣೆ ಮಾಡಿದರು. ಮಲ್ಲಿನಾಥ ಜಮಾದಾರ ವಂದಿಸಿದರು.