ಬಸವಕಲ್ಯಾಣ ತಾಲೂಕಿನ ಚಂಡಕಾಪುರದಲ್ಲಿ ಬುಧವಾರ ಉದ್ಯೋಗ ಖಾತ್ರಿ ನಡಿಗೆ ಸಬಲತೆಯೆಡೆಗೆ ಅಭಿಯಾನಕ್ಕೆ ತಾಪಂ ಇಒ ರಮೇಶ ಸುಲ್ಫಿ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷೆ ಕಂಚವ್ವ, ಪಿಡಿಒ ಮಲ್ಲನಗೌಡ್ರು, ರೇವಣಸಿದ್ದ ಹೇಡಂಪಳ್ಳಿ, ಐಇಸಿ ಸಂಯೋಜಕ ವೀರಾರೆಡ್ಡಿ ಇತರರಿದ್ದರು. 
ಜಿಲ್ಲೆ

ವೇಳಾಪಟ್ಟಿಯಂತೆ ಕ್ರಿಯಾಯೋಜನೆ ರೂಪಿಸಿ

ಬಸವಕಲ್ಯಾಣ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ೨೦೨೫-೨೬ರ ಕಾರ್ಮಿಕ ಆಯವ್ಯಯ ತಯಾರಿಸಲು ಇಲಾಖೆ ಸಿದ್ಧಪಡಿಸಿದ ವೇಳಾಪಟ್ಟಿಯಂತೆ ಚಟುವಟಿಕೆ ಪೂರ್ಣಗೊಳಿಸಿ ಸಲ್ಲಿಸಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ ಸುಲ್ಫಿ ಹೇಳಿದರು.

ಚಂಡಕಾಪುರ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡ ಉದ್ಯೋಗ ಖಾತ್ರಿ ನಡಿಗೆ ಸಬಲತೆಯೆಡೆಗೆ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಅಭಿಯಾನ ಸಂದರ್ಭದಲ್ಲಿ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ಮನೆ ಮನೆಗೆ ಭೇಟಿ ನೀಡಿ ಬೇಡಿಕೆ ಸ್ವೀಕರಿಸಬೇಕು. ಗಂಡು-ಹೆಣ್ಣಿಗೆ ಸಮಾನ ಕೂಲಿ, ಯೋಜನೆಯಡಿ ಸಿಗುವ ಸೌಲಭ್ಯ, ಅರ್ಹತೆ, ಗ್ರಾಮೀಣ ಪ್ರದೇಶದಲ್ಲಿ ಕುಟುಂಬಕ್ಕೆ ೧೦೦ ದಿನ ಕೆಲಸ ಖಾತ್ರಿ ಸೇರಿ ಸಂಪೂರ್ಣ ಮಾಹಿತಿ ನೀಡಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ಕಂಚವ್ವ ಮಾರುತಿ, ಉಪಾಧ್ಯಕ್ಷ ಎಂ.ಡಿ. ಜಿಲಾನಿ, ಸದಸ್ಯರಾದ ಬಬ್ಲೂಶೇಖ, ದತ್ತು ಬೊಕ್ಕೆ, ಪಿಡಿಒ ಮಲ್ಲನ ಗೌಡ್ರು, ಕಾರ್ಯದರ್ಶಿ ರೇವಣಸಿದ್ಧ ಹೇಡಂಪಳ್ಳಿ, ಐಇಸಿ ಸಂಯೋಜಕ ವೀರಾರೆಡ್ಡಿ ಇತರರಿದ್ದರು.