ಜಿಲ್ಲೆ

ಉದ್ಯೋಗಖಾತ್ರಿ ಸಾಮಾಜಿಕ ಲೆಕ್ಕ ಪರಿಶೋಧನೆ ಸಭೆ

ಚಿಂತಾಮಣಿ: ತಾಲೂಕಿನ ಮುರುಗಮಲ್ಲ ಗಾಪಂ ಅವರಣದಲ್ಲಿ ಸೋಮವಾರ ಗ್ರಾಪಂ ನೋಡಲ್ ಅಧಿಕಾರಿ ಹಾಗೂ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಚನ್ನಕೇಶವರೆಡ್ಡಿ ಅಧ್ಯಕ್ಷತೆಯಲ್ಲಿ 2025-26 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣಾ ಉದ್ಯೋಗ ಖಾತರಿ ಯೋಜನೆಯಡಿ ಸಾಮಾಜಿಕ ಲೆಕ್ಕ ಪರಿಶೋಧನೆ ಸಭೆ ನಡೆಯಿತು.

ಸಭೆಯಲ್ಲಿ 2024-25 ನೇ ಸಾಲಿನ 15 ನೇ ಹಣಕಾಸು ಯೋಜನೆ, 2020-21 ರಿಂದ 2024-25ನೇ ಸಾಲಿನ ಜಿಲ್ಲಾ ಮತ್ತು ತಾಲೂಕು ರಾಜ್ಯ ಹಣಕಾಸು ಯೋಜನೆ ಮತ್ತು 2025-26 ನೇ ಸಾಲಿನ ಸಾಮಾಜಿಕ ಪರಿಶೋಧನೆ ವೇಳೆ ಸೃಜನೆಯಾಗಿರುವ ಕಾಮಗಾರಿ ಮತ್ತು ವೆಚ್ಚದ ಬಗ್ಗೆ ಚರ್ಚಿಸಲಾಯಿತು.

ಗ್ರಾಪಂ ಅಧ್ಯಕ್ಷ ಅನ್ಸರ್ ಖಾನ್, ಉಪಾಧ್ಯಕ್ಷೆ ಮುನಿರತ್ನಮ್ಮ, ಪಿಡಿಒ ವಿ.ಸುರೇಶ್, ತಾಲೂಕು ಸಂಯೋಜಕ ಮಹೇಶ್, ಕಾರ್ಯದರ್ಶಿ ಕೆ.ಸರಿತಾ ಹಾಗೂ ಗ್ರಾಮಸ್ಥರು ಇದ್ದರು.