ಜಿಲ್ಲೆ

ಸಹಕಾರಿ ಸಂಘದಲ್ಲಿನ ಹಣ ಕಳ್ಳತನ ಮಾಡಿದ ನೌಕರನಿಗೆ 2 ವರ್ಷ ಜೈಲು ಶಿಕ್ಷೆ

ರಾಣೆಬೆನ್ನೂರ: ಸಹಕಾರಿ ಸಂಘದಲ್ಲಿನ ಹಣ ಕಳ್ಳತನ ಮಾಡಿದ ನೌಕರನಿಗೆ 2 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 4 ಸಾವಿರ ರೂ. ದಂಡ ವಿಧಿಸಿ ಇಲ್ಲಿಯ 1ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಬಿ. ಸಿದ್ದರಾಜು ಗುರುವಾರ ಆದೇಶ ಹೊರಡಿಸಿದ್ದಾರೆ.
ತಾಲೂಕಿನ ಕುಪ್ಪೇಲೂರ ಗ್ರಾಮದ ನಿಂಗರೆಡ್ಡಿ ದೇವೇಂದ್ರಪ್ಪ ಗುಡ್ಡರೆಡ್ಡಿ ಶಿಕ್ಷೆಗೊಳಗಾದ ಅಪರಾಧಿ.
ಈತ ಕುಪ್ಪೇಲೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಿಪಾಯಿ ಕೆಲಸ ಮಾಡಿಕೊಂಡಿದ್ದ. 2017 ಅಕ್ಟೋಬರ್ 16ರಂದು ಕ್ಯಾಶ ಕೌಂಟರ್‌ನಿಂದ 13,500 ರೂ. ಕಳ್ಳತನ ಮಾಡಿದ್ದ. ಈ ಕುರಿತು ಸಂಘದವರು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಸಾಕ್ಷಾೃಧಾರ ಸಮೇತ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಶಿಕ್ಷೆ ವಿಧಿಸಿ ತೀರ್ಪು ನೀಡಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮಧುಮತಿ ಸಿದ್ನೂರಕರ ವಾದ ಮಂಡಿಸಿದ್ದರು.