ಕೆರೂರ : ಕೆರೆಗಳ ಅಭಿವದ್ಧಿಯಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ರೈತರ ಕಷಿ ಚಟುವಟಿಕೆಗಳಿಗೆ ಸಹಕಾರಿಯಾಗುತ್ತದೆ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.
ಸಮೀಪದ ಮಾಲಗಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡದ, ಸಣ್ಣ ನೀರಾವರಿ ಹಾಗೂ ಅಂತರ್ಜಲ ಇಲಾಖೆಯಿಂದ ಹಮ್ಮಿಕೊಂಡಿದ್ದ ಕೆರೆ ಅಭಿವದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕೆರೆ ಅಭಿವದ್ಧಿ ಜೊತೆಗೆ ಗ್ರಾಮಸ್ಥರು ಕೆರೆಯ ಸ್ವಚ್ಚತೆ ಕಾಪಾಡಬೇಕು. ಇದರಿಂದ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಹೇಳಿದರು.
ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕು. ಕಾಮಗಾರಿ ಗುಣಮಟ್ಟದ್ದಾಗಿರಬೇಕು ಎಂದು ಹೇಳಿದರು.
ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಅನವಾಲ- ಕೈನಕಟ್ಟಿ ಗ್ರಾಮದ ನಡುವಿನ ಸುಮಾರು 2.3 ಕಿ.ಮೀ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿದರು, ಧರ್ಮಣ್ಣ ಭಗವತಿ, ಅಶೋಕ ಕೊಪ್ಪದ, ಪ್ರವೀಣ ಪಾಟೀಲ, ಕುಮಾರ ಕಕರಡ್ಡಿ, ಗುತ್ತಿಗೆದಾರ ಬಸವರಾಜ ಮೇಟಿ, ಅಜೀತ ಬಂಟನೂರ, ಈರಣ್ಣ ನಾಗಠಾಣ ಹಾಗೂ ಗ್ರಾಮಸ್ಥರು ಇದ್ದರು.