ಜಿಲ್ಲೆ

ಪಠ್ಯದೊಂದಿಗೆ ಪಠ್ಯೇತರಕ್ಕೂ ಮಹತ್ವ ನೀಡಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಪಠ್ಯೇತರ ಚಟುವಟಿಕೆ ಮತ್ತು ಸಾಂಸತಿಕ ಯುವಜನೋತ್ಸವದಲ್ಲಿ ಭಾಗವಹಿಸಲು ವಿದ್ಯಾಥಿರ್ಗಳಿಗೆ ಕರ್ನಾಟಕ ವಿಶ್ವ ವಿದ್ಯಾಲಯ ಎಲ್ಲ ರೀತಿಯಿಂದ ಸಹಕಾರ ನೀಡಲಿದೆ ಎಂದು ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಹೇಳಿದರು.
ಪಂಜಾಬ್​ ಲೂಧೀಯಾನದ ಪಂಜಾಬ್​ ಕೃವಿ ವಿಶ್ವ ವಿದ್ಯಾಲಯ ಮಾ. 28ರಿಂದ ಏ. 1ರವರೆಗೆ ಆಯೋಜಿಸಿದ್ದ 37ನೇ ರಾಷ್ಟ್ರ ಮಟ್ಟದ ಅಂತರ ವಿಶ್ವವಿದ್ಯಾಲಯದ ಯುವ ಜನೋತ್ಸವದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ವಿದ್ಯಾಥಿರ್ಗಳಿಗೆ ಕವಿವಿ ಆವರಣದಲ್ಲಿ ಇತ್ತೀಚೆಗೆ ಸನ್ಮಾನಿಸಿ ಅವರು ಮಾತನಾಡಿದರು.
ವಿದ್ಯಾಥಿರ್ಗಳು ಸಿಕ್ಕ ಅವಕಾಶ ಬಳಕೆ ಮಾಡಿಕೊಳ್ಳಬೇಕು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಬೇಕು. ಸಾಧನೆ ಮಾಡುವ ಛಲ ಹೊಂದಿದಾಗ ಮಾತ್ರ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.
ವಿದ್ಯಾಥಿರ್ ಕಲ್ಯಾಣಾಧಿಕಾರಿ ಡಾ. ಸೀತಾರಾಂ ಪವಾರ ಮಾತನಾಡಿ, ದೇಶದ 8 ವಲಯಗಳ 117 ವಿವಿಗಳು ಯುವ ಜನೋತ್ಸವದಲ್ಲಿ ಭಾಗವಹಿಸಿದ್ದವು. ಇದರಲ್ಲಿ ಕವಿವಿ ವ್ಯಾಪ್ತಿಯ ವಿವಿಧ ಕಾಲೇಜಿನ 14 ವಿದ್ಯಾಥಿರ್ಗಳು 7 ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ ಎಂದರು.
ಡಾ. ದಿನೇಶ ನಾರಾಯಣಕರ ಮಾತನಾಡಿ, ವಿದ್ಯಾಥಿರ್ಗಳಲ್ಲಿ ಪ್ರತಿಭೆ ಕೌಶಲ ತರುವಲ್ಲಿ ಯುವ ಜನೋತ್ಸವ ಸಹಕಾರಿ. ಈ ನಿಟ್ಟಿನಲ್ಲಿ ವಿದ್ಯಾಥಿರ್ಗಳು ಯಾವುದೇ ಒಂದು ವಿಷಯದಲ್ಲಿ ಹವ್ಯಾಸ ಬೆಳಸಿಕೊಂಡು ಸಾಧನೆಗೆ ಬಳಸಿಕೊಳ್ಳಬೇಕು ಎಂದರು.
ಕುಲಸಚಿವರಾದ ಡಾ. ಎ. ಚೆನ್ನಪ್ಪ, ಡಾ. ನಿಜಲಿಂಗಪ್ಪ ಮಟ್ಟಿಹಾಳ, ಹಣಕಾಸು ಅಧಿಕಾರಿ ಪ್ರೊ. ಸಿ. ಕೃಷ್ಣಮೂತಿರ್, ಡಾ. ಬಿ.ಎಚ್​.ನಾಗೂರ, ಡಾ. ನಾಗರಾಜ ಮುಗದೂರ, ಡಾ.ವಿಶ್ವನಾಥ ಚಚಡಿ ಡಾ. ಶಿವಶರಣ, ವಿದ್ಯಾಥಿರ್ಗಳು, ಇತರರು ಇದ್ದರು.