ಚಿಕ್ಕಮಗಳೂರಿನ ಕಲ್ದೊಡ್ಡಿ ಶಾಂತಿನಗರದಲ್ಲಿ ವಿವೇಕಾನಂದರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ವನಮಹೋತ್ಸವದ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂತೋಷ್, ಜ್ಯೋತಿ, ಆರ್.ರಾಜು, ಎಚ್.ಟಿ.ಚೇತನ್‌ಕುಮಾರ್, ಹರೀಶ್, ರಾಮು ಮತ್ತಿತರರಿದ್ದರು. 
ಜಿಲ್ಲೆ

ಪರಿಸರ ರಕ್ಷಣೆಗೆ ಒತ್ತು ನೀಡಿ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಪರಿಸರವನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪಣತೊಡಬೇಕಾಗಿದೆ. ಆದರೆ ಮನುಷ್ಯನು ಗೃಹ ನಿರ್ಮಾಣ ಮತ್ತು ರಸ್ತೆ ನಿರ್ಮಾಣ ಮಾಡುವುದಕ್ಕಾಗಿ ಮರ ಗಿಡಗಳನ್ನು ಕಡಿದು ಪರಿಸರವನ್ನು ನಾಶ ಮಾಡುತ್ತಿದ್ದಾನೆ ಎಂದು ಸಾರಿಗೆ ಕಚೇರಿಯ ತಾಂತ್ರಿಕ ವಿಭಾಗ ಸಹಾಯಕ ಸಂತೋಷ್ ಬೇಸರ ವ್ಯಕ್ತಪಡಿಸಿದರು.

ನಗರದ ಹೊರವಲಯದ ಕಲ್ದೊಡ್ಡಿ ಶಾಂತಿನಗರದಲ್ಲಿ ಸಿಡಿಲ ಸಂತ, ವೀರ ಸನ್ಯಾಸಿ, ಸ್ವಾಮಿ ವಿವೇಕಾನಂದರ ಪುಣ್ಯ ಸ್ಮರಣೆಯನ್ನು ವಿವೇಕಾನಂದ ಯುವಕ ಸಂಘ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿAದ ಹನುಮಂತ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಪೀಳಿಗೆಗೆ ಶುದ್ಧವಾದ ಗಾಳಿ, ಪರಿಸರ ಸಿಗುವಂತಾಗಬೇಕಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿವೇಕಾನಂದರ ಪುಣ್ಯಸ್ಮರಣೆಯ ದಿನದಂದು ವನಮಹೋತ್ಸವ ಆಚರಿಸುತ್ತಿರುವುದು ಸ್ವಾಗತಾರ್ಹ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮೇಲ್ವಿಚಾರಕಿ ಜ್ಯೋತಿ ಮಾತನಾಡಿ, ವಿವೇಕಾನಂದ ಯುವಕ ಸಂಘವು ಸಂಘಟಿತವಾಗಿ ನಡೆಸುತ್ತಿರುವ ಈ ಕಾರ್ಯವು ಎಲ್ಲ ಯುವಕರಿಗೆ ಮಾದರಿಯಾಗಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಆರ್. ರಾಜು, ಕಾರ್ಯದರ್ಶಿ ಎಚ್.ಟಿ.ಚೇತನ್ ಕುಮಾರ್, ಸಂಘಟನಾ ಕಾರ್ಯದರ್ಶಿ ಹರೀಶ್, ಉಪಾಧ್ಯಕ್ಷ ರಾಮು, ಗ್ರಾಮದ ಮುಖಂಡರಾದ ಎನ್.ಶಿವು, ಎನ್.ರಾಜು, ಯುಧಿಷ್ಠಿರ, ಸುನಿತಾ, ಉಷಾ ಮತ್ತಿತರರಿದ್ದರು.