ಜಿಲ್ಲೆ

ತಂಬಾಕು ಬದಲು ಹೈನುಗಾರಿಕೆಗೆ ಒತ್ತು ನೀಡಿ

ರಾವಂದೂರು: ರೈತರು ತಂಬಾಕು ಬೆಳೆಯನ್ನು ಬೆಳೆಯುವುದರ ಬದಲು ಹೈನುಗಾರಿಕೆಗೂ ಕೂಡ ಹೆಚ್ಚಿನ ಒತ್ತು ನೀಡಬೇಕು ಎಂದು ಸಚಿವ ಕೆ. ವೆಂಕಟೇಶ್ ಹೇಳಿದರು.

ಪಿರಿಯಾಪಟ್ಟಣ ತಾಲೂಕು ಮಾಕನಹಳ್ಳಿ ಪಾಳ್ಯ ಗ್ರಾಮದಲ್ಲಿ ಭಾನುವಾರ ನೂತನ ಬಿಎಂಸಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ತಂಬಾಕಿಗೆ ಪರ್ಯಾಯ ಬೆಳೆಯಾದ ರೇಷ್ಮೆ ಹಾಗೂ ಇನ್ನಿತರ ವ್ಯವಸಾಯಗಳನ್ನು ಅವಲಂಬಿಸಿ ಆದ್ದರಿಂದ ಆರ್ಥಿಕ ಅಭಿವೃದ್ಧಿ ಹೊಂದುವ ಮೂಲಕ ಉತ್ತಮ ಜೀವನ ನಡೆಸಬಹುದು. ರಾಜ್ಯ ಸರ್ಕಾರ ರೈತರಿಗೋಸ್ಕರ ಹಲವು ಯೋಜನೆಗಳನ್ನು ರೂಪಿಸಿದ್ದು, ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿಟಿ ಸ್ವಾಮಿ, ಗ್ರಾಪಂ ಅಧ್ಯಕ್ಷ್ಷೆ ಅನಿತಾ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಾಗರಾಜೇಗೌಡ, ಉಪಾಧ್ಯಕ್ಷೆ ವಸಂತಮ್ಮ, ತಹಸೀಲ್ದಾರ್ ಕುಂಜಿ ಅಹಮದ್, ಸಹಕಾರ ಇಲಾಕೆ ಅಭಿವೃದ್ಧಿ ಅಧಿಕಾರಿ ಜಿ.ಇತೇಂದ್ರ , ವಿಸ್ತರಣಾಧಿಕಾರಿ ನಂದಿನಿ, ಡಾಕ್ಟರ್ ಸೋಮಯ್ಯ, ಕಾರ್ಯದರ್ಶಿ ಮಾದೇಗೌಡ ಇತರರು ಇದ್ದರು.