ಕಿಕ್ಕೇರಿಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಶಿವರಾತ್ರಿ ಹಬ್ಬದ ಅಂಗವಾಗಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಸುರೇಶ್, ಶ್ರೀಕಾಂತ್, ಫತಾರಾಂ, ದೇವರಾಜು, ಜೇಟುಸಿಂಗ್, ನಾಗಮ್ಮ ಇದ್ದರು.  
ಜಿಲ್ಲೆ

ಕನ್ನಡ ಭಾಷೆ, ಗೀತೆಗಳಿಗೆ ಒತ್ತು ಸಿಗಲಿ

ಅಭಿನಯ್ ಎಚ್.ಎಂ

ಕಿಕ್ಕೇರಿ: ಕನ್ನಡ ಭಾಷೆ, ಗೀತೆಗಳಿಗೆ ಒತ್ತು ನೀಡುವುದರಿಂದ ಸುಲಭವಾಗಿ ಎಲ್ಲರಿಗೂ ಅದು ಅರ್ಥವಾಗಲಿದೆ ಎಂದು ಕೆಪಿಸಿಸಿ ಸದಸ್ಯ ಸುರೇಶ್ ಅಭಿಪ್ರಾಯಪಟ್ಟರು.

ಶಿವರಾತ್ರಿ ಅಂಗವಾಗಿ ಇಲ್ಲಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಬಿಟ್ಟು ಅನ್ಯಭಾಷೆ ಅರ್ಥವಾಗುವುದಿಲ್ಲ. ಸಂದೇಶ, ಭಕ್ತಿಗೀತೆಗಳನ್ನು ಕೇಳಿಸುವಾಗ ಕನ್ನಡದಲ್ಲಿರುವ ಶಿವಸ್ತ್ರೋತ್ರಗಳನ್ನು ಬಳಸಿದರೆ ಅಧ್ಯಾತ್ಮ ಚಿಂತನೆಯತ್ತ ಎಲ್ಲರ ಮನಸ್ಸು ಸಾಗಲಿದೆ ಎಂದರು.

ಸ್ಥಳೀಯ ಮುಖಂಡರಾದ ಶ್ರೀಕಾಂತ್, ಫತಾರಾಂ, ದೇವರಾಜು, ಜೇಟುಸಿಂಗ್, ನಾಗಮ್ಮ ಮುಂತಾದವರಿದ್ದರು.