ಜಿಲ್ಲೆ

ಭಾವೈಕ್ಯತೆಗೆ ಒತ್ತು ಸಂಘಟನೆಯ ಗುರಿ

ಸುಳ್ಯ: ರಾಷ್ಟ್ರೀಯತೆ, ಭಾವೈಕ್ಯತೆ, ಸಹ ಬಾಳ್ವೆ ಇವುಗಳ ಮಧ್ಯೆ ನಾಗರಿಕ ಸಮಾಜದ ನಡುವೆ ಕೊಂಡಿಯಾಗುವುದು ಪ್ರಜಾಧ್ವನಿ ಕರ್ನಾಟಕದ ಮೂಲ ಉದ್ದೇಶ ಎಂದು ಪ್ರಜಾಧ್ವನಿ ಸಂಘದ ಸಂಚಾಲಕ ಗೋಪಾಲ ಪೆರಾಜೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಂವಿಧಾನ ಪೀಠಿಕೆಯಲ್ಲಿನ ಅಂಶಗಳು ಮತ್ತು ದೇಶದ ಸಂರಕ್ಷಣೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆಗಳ ಬಗ್ಗೆ ಹೊಸ ಪೀಳಿಗೆಯಲ್ಲಿ ರಾಷ್ಟ್ರ ಪ್ರೇಮ ಹುಟ್ಟುವಂತೆ ಮಾಡಿ ಭಾರತೀಯರು ಎನ್ನುವ ಒಗ್ಗಟ್ಟು ಸೃಷ್ಟಿಸುವ ಕಾರ್ಯಚಟುವಟಿಕೆಗಳು, ಪ್ರಜಾಧ್ವನಿ ಸಂಘಟನೆಯ ಮೂಲ ಉದ್ದೇಶವಾಗಲಿದೆ ಎಂದರು.

ಸಮಿತಿ ಸದಸ್ಯ ಅಶೋಕ್ ಎಡಮಲೆ, ಉಮ್ಮರ್ ಕೆ.ಎಸ್., ಪ್ರವೀಣ್ ಮುಂಡೋಡಿ, ವಸಂತ ಪೆಲ್ತಡ್ಕ, ಮಂಜುನಾಥ್ ಮಡ್ತಿಲ, ಮಹೇಶ್ ಬೆಳ್ಳಾರ್ಕರ್, ಕರುಣಾಕರ ಪಲ್ಲತಡ್ಕ ಉಪಸ್ಥಿತರಿದ್ದರು.