ವಿಜಯಪುರ:ಅಣ್ಣ ತಂಗಿಯರ ಬಾಂಧವ್ಯ ಬೆಸೆಯುವ ಹಬ್ಬವೆಂದೇ ಐತಿಹ್ಯ ಹೊಂದಿರುವ ರಾ ಬಂಧನ ಹಬ್ಬಕ್ಕೆ ನಗರದೆಲ್ಲೆಡೆ ಭರದ ಸಿದ್ಧತೆ ನಡೆದಿದೆ. ಶ್ರಾವಣ ಮಾಸದ ನೂಲು ಹುಣ್ಣಿಮೆಯ ದಿನ (ಆ. 9) ಶನಿವಾರ ರಾ ಬಂಧನ ಹಬ್ಬ ಆಚರಿಸಲಾಗುತ್ತಿದ್ದು, ಸಹೋದರಿಯರು ತಮ್ಮ ಅಣ್ಣ&ತಮ್ಮಂದಿರಿಗೆ ಕಟ್ಟಲು ರಾಖಿ ಖರೀದಿಸಲು ತೊಡಗಿದ್ದಾರೆ.
ಹಿಂದು ಸಂಪ್ರದಾಯದಲ್ಲಿ ಆಚರಿಸುವ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ. ರಾ ಬಂಧನ ಹಬ್ಬದಲ್ಲಿ ಸಹೋದರಿಯರು ತಮ್ಮ ಅಣ್ಣ& ತಮ್ಮಂದಿರಿಗೆ ರಾಖಿ ಕಟ್ಟಿ, ಆರತಿ ಬೆಳಗಿ ಅವರ ಶ್ರೇಯಸ್ಸಿಗಾಗಿ ಆಶೀರ್ವದಿಸುತ್ತಾರೆ.
ಅದಕ್ಕೆ ಪ್ರತಿಯಾಗಿ ಸಹೋದರರು ಕೂಡಾ ಕಷ್ಟದ ಸಮಯದಲ್ಲಿ ಸದಾ ನಾನು ಜೊತೆಗಿರುವೆ ಎಂದು ಹೇಳಿ, ಸಹೋದರಿಗೆ ರಣೆಯ ಅಭಯ ನೀಡುತ್ತಾರೆ. ಅಲ್ಲದೆ, ಉಡುಗೊರೆ ರೂಪದಲ್ಲಿ ಸಹೋದರಿಗೆ ಇಷ್ಟವಾದ ವಸ್ತುಗಳನ್ನು ನೀಡುವ ಐತಿಹಾಸಿಕ ಹಿನ್ನೆಲೆ ಈ ಹಬ್ಬಕ್ಕೆ ಇದೆ.
ರಾಖಿ ಬಂಧನ ಹಬ್ಬದ ಅಂಗವಾಗಿ ಇಲ್ಲಿನ ಗಾಂಧಿಚೌಕ್ ಬಳಿ 30ಕ್ಕೂ ಅಧಿಕ ತಾತ್ಕಾಲಿಕ ರಾಖಿ ಮಳಿಗೆಗಳು ತೆರೆದುಕೊಂಡಿವೆ. ಈಗಾಗಲೇ, ರಾಖಿಗಳ ಮಾರಾಟವೂ ಕೂಡಾ ಜೋರಾಗಿಯೇ ನಡೆದಿದೆ. ಶನಿವಾರ ಆಚರಿಸಲಿರುವ ಹಬ್ಬಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿರುವ ಸಹೋದರಿಯರು ರಾಖಿ ಖರೀದಿಸುತ್ತಿರುವ ದೃಶ್ಯಗಳು ಗುರುವಾರ ಮಾರುಕಟ್ಟೆಯಲ್ಲಿ ಕಂಡುಬಂದವು.
ತರಹೇವಾರಿ ರಾಖಿಗಳು: ಹಬ್ಬದ ಹಿನ್ನೆಲೆಯಲ್ಲಿ ವಿವಿಧ ನಮೂನೆಯ ರಾಖಿಗಳು ಮಾರುಕಟ್ಟೆಗೆ ಬಂದಿದ್ದು, ಜನರನ್ನು ಆಕರ್ಷಿಸುತ್ತಿವೆ. ಅದರಲ್ಲೂ ವಿಶೇಷವಾಗಿ ಸ್ಟೋನ್ ರಾಖಿ, ಮುತ್ತಿನ ರಾಖಿ, ನೂಲಿನ ರಾಖಿ, ಚಂದನ ಮತ್ತು ಕುಂದನ್ ರಾಖಿ, ಮೆಟಲ್, ರೇಷ್ಮೆ ರಾಖಿಗಳು ಜನರನ್ನು ತನ್ನತ್ತ ಸೆಳೆಯುತ್ತಿವೆ. 5 ರೂ. ಗಳಿಂದ ಹಿಡಿದು 250 ರೂಪಾಯಿಗಳ ಆಸುಪಾಸಿನಲ್ಲಿ ಅವುಗಳ ವಿನ್ಯಾಸ ಹಾಗೂ ವೈಶಿಷ್ಟತೆಗೆ ಅನುಗುಣವಾಗಿ ರಾಖಿಗಳು ಮಾರಾಟಗೊಳ್ಳುತ್ತಿವೆ. ಪ್ರತಿ ವರ್ಷ ಹಬ್ಬಕ್ಕೂ ಎಂಟತ್ತು ದಿನಗಳ ಮುಂಚಿತವಾಗಿ ಸ್ಟಾಲ್ಗಳನ್ನು ಹಾಕಿ ರಾಖಿ ಮಾರಾಟ ಮಾಡುತ್ತೇವೆ. ಮಹಾರಾಷ್ಟ್ರದ ಮುಂಬಯಿನಿಂದ ರಾಖಿಗಳನ್ನು ತರಿಸಿಕೊಳ್ಳಲಾಗಿದೆ. ಜನರು ಈಗೀಗ ಆನ್ಲೆನ್ ವ್ಯಾಪಾರಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಆನ್ಲೆನ್ ಮೂಲಕವೇ ರಾಖಿಗಳನ್ನು ಆರ್ಡರ್ ಮಾಡುತ್ತಿದ್ದಾರೆ. ಅದರಿಂದ ನಮ್ಮ ವ್ಯಾಪಾರಕ್ಕೆ ಕೊಂಚ ಹೊಡೆತ ಬಿದ್ದಿದೆ. ಸ್ಟಾಲ್ ಸ್ಥಾಪಿಸಲು ಪಾಲಿಕೆ ಪರವಾನಗಿ, ಹೆಸ್ಕಾಂ ಪರ್ಮಿಶನ್ ಸೇರಿದಂತೆ ಇನ್ನಿತರ ಖರ್ಚು ತೆಗೆದು ಹಬ್ಬದಲ್ಲಿ 30 ರಿಂದ 40 ಸಾವಿರ ಆಸುಪಾಸಿನಲ್ಲಿ ಲಾಭ ಆಗುತ್ತದೆ ಎನ್ನುತ್ತಾರೆ ರಾಖಿ ಮಳಿಗೆ ಮಾಲೀಕ ಯಲ್ಲಪ್ಪ ೂರ್ಪಡೆ. ಹಬ್ಬದ ಅಂಗವಾಗಿ ಮನೆಗಳಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಬೇಸನ್ ಉಂಡಿ, ರವಾ ಉಂಡಿ, ಚಕಲಿ, ಕರ್ಚಿಕಾಯಿ, ಶಂಕರ ಪೋಳಾ, ಒಗ್ಗರಣೆ ಅವಲಕ್ಕಿ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ತಯಾರಿಸಿ ರಾಖಿ ಕಟ್ಟಿದ ಬಳಿಕ ಮನೆ ಮಂದಿ ಎಲ್ಲಾ ಸೇರಿ ಹಬ್ಬದೂಟ ಸವಿದು ಸಂಭ್ರಮಿಸುತ್ತಾರೆ.
ಸೈನಿಕರಿಗೆ ರಾಖಿ ಕಳುಹಿಸಿದ ವಿದ್ಯಾರ್ಥಿಗಳು : ವಿಜಯಪುರ ನಗರದ ವಿಜಯಲಕ್ಷಿ$್ಮ ಸವೋರ್ತ್ತಮ ದೇಶಪಾಂಡೆ ಶಿಣ ಮತ್ತು ಸಮಾಜ ಕಲ್ಯಾಣ ಸಂ ವಿಶೇಷ ಚೇತನ ಮಕ್ಕಳ ಪುನಶ್ಚೇತನ ಕೇಂದ್ರದ ಮಕ್ಕಳು ಹಾಗೂ ರುಕ್ಮಾಂಗದ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಮನೆಯಲ್ಲಿರುವ ನಿರುಪಯುಕ್ತ ವಸ್ತುಗಳನ್ನು ಬಳಸುವ ಮೂಲಕ ವಿಭಿನ್ನ ಶೈಲಿಯ ರಾಖಿಗಳನ್ನು ತಯಾರಿಸಿ ಗಡಿಕಾಯುವ ಯೋಧರಿಗಾಗಿ ಕಳುಹಿಸುವ ಮೂಲಕ ದೇಶ ಪ್ರೇಮ ಮೆರೆದಿದ್ದಾರೆ. ಮಕ್ಕಳು ರಾಖಿಗಳು ಒಳಗೊಂಡ ಪೆಟ್ಟಿಗೆಯನ್ನು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರಿಗೆ ಕೊಟ್ಟು ವೀರಯೋಧರ ವಿಳಾಸಕ್ಕೆ ಕಳುಹಿಸಲು ವಿನಂತಿಸಿದ್ದಾರೆ. ವೀರ ಯೋಧರ ಮೇಲೆ ಮಕ್ಕಳು ತೋರಿದ ದೇಶ ಪ್ರೇಮಕ್ಕೆ ಜಿಲ್ಲಾಧಿಕಾರಿಗಳು ಶ್ಲಾಸಿದ್ದಾರೆ. ವಿಶೇಷ ಚೇತನ ಮಕ್ಕಳ ಪುನಶ್ಚೇತನ ಕೇಂದ್ರದ ಮುಖ್ಯಸ್ಥ ಪ್ರಶಾಂತ ದೇಶಪಾಂಡೆ ಮಾತನಾಡಿ, ಇಂದು ನಮಗಾಗಿ ಹಗಲಿರುಳು ಎನ್ನದೆ ದೇಶ ಕಾಯುತ್ತಿರುವ ಯೋಧರಿಂದಲೇ ನಾವು ಇಷ್ಟು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಅಲ್ಲದೆ, ಅವರಿಂದ ದೇಶ ಸುಭದ್ರವಾಗಿರಲು ಸಾಧ್ಯವಾಗಿದೆ. ಅಂತಹ ವೀರ ಯೋಧರಿಗೆ ರಾಖಿಯನ್ನು ಕಳಿಸುತ್ತಿರುವುದು ಬಹಳ ಸಂತೋಷವೆನಿಸುತ್ತದೆ ಎಂದರು. ರುಕ್ಮಾಂಗದ ಶಾಲೆಯ ಶಿಕ್ಷಕ ಮನೋಜ ಗಿರಗಾಂವಿ ಮಾತನಾಡಿ, ಹೆತ್ತ ತಾಯಿ, ಭೂಮಿ ತಾಯಿ ಸ್ವರ್ಗಕ್ಕಿಂತ ದೊಡ್ಡವಳು. ಅಂತಹ ಭಾರತದ ನೆಲ, ಜಲ ರಣೆಗಾಗಿ ಸೇವೆ ಸಲ್ಲಿಸುತ್ತಿರುವ ಯೋಧರ ಕಾರ್ಯ ನಿಜವಾಗಲೂ ಅಭಿನಂದನೀಯ. ಮಕ್ಕಳಲ್ಲಿ ದೇಶಪ್ರೇಮ ಬೆಳಸುವ ನಿಟ್ಟಿನಲ್ಲಿ ಮಕ್ಕಳು ತಾವೇ ತಯಾರಿಸಿ ರಾಖಿಯನ್ನು ಯೋಧರಿಗೆ ಕಳುಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಶೋಕ ಹಿರೇಮಠ, ಪ್ರತಿಮಾ ಪೂಜಾರಿ, ಕಸ್ತೂರಿ ಕಾಂಬಳೆ, ಮಂಜುನಾಥ ಕಾಂಬಳೆ, ಸುಪ್ರಿತ ಅಲಬನೂರು, ಅಂಬರೀಶ, ಜ್ಯೋತಿ ತಡ, ರಿಯಾಜ್ ಚಿಗರೊಳ್ಳಿ ಮತ್ತಿತರರು ಮಕ್ಕಳಿಗೆ ರಾಖಿ ಮಾರ್ಗದರ್ಶನ ಮಾಡಿದರು. ವಿಜಯಪುರದಲ್ಲಿನ ವಿಶೇಷ ಚೇತನ ಮಕ್ಕಳ ಪುನಶ್ಚೇತನ ಕೇಂದ್ರದ ಹಾಗೂ ರುಕ್ಮಾಂಗದ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ವಿಭಿನ್ನ ಶೈಲಿಯ ರಾಖಿಗಳನ್ನು ತಯಾರಿಸಿ ಗಡಿಕಾಯುವ ಯೋಧರಿಗಾಗಿ ಕಳುಹಿಸಿದರು.