ಬೆಳಗಾವಿ: ಮನಸಿನ ಭಾವನೆಗಳು ಮೂರ್ತ ರೂಪ ತಾಳಿ ಹೊರಹೊಮ್ಮಿದಾಗ ಭಾವಗೀತೆಗಳು ಸೃಷ್ಟಿಯಾಗುತ್ತವೆ ಎಂದು ಡಾ.ಭಾರತಿ ಮಠದ ಹೇಳಿದರು.
ತಾಲೂಕಿನ ಬೆಂಡಿಗೇರಿಯ ವಾಸಂತಿ ಮೇಳೆದ ತೋಟದ ಮನೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಲೇಖಕಿಯರ ಸಂಘದ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಆಶಾ ಯಮಕನಮರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಲೇಖಕಿಯರಿಗಾಗಿ ಸ್ವರಚಿತ ಭಾವಗೀತೆ, ಜಾನಪದ ಗೀತಗಾಯನ ಹಾಗೂ ಒಡಪಿಗೊಂದು ಒಡಪು ಮತ್ತು ಸಾಹಿತ್ಯಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಲಲಿತಾ ಕ್ಯಾಸನ್ನವರ, ರಾಜೇಶ್ವರಿ ಹಿರೇಮಠ, ಸುನೀತಾ ಸೊಲ್ಲಾಪುರೆ, ಅನ್ನಪೂರ್ಣಾ ಹಿರೇಮಠ, ಸುಪ್ರೀಯಾ ದೇಶಪಾಂಡೆ, ಶುಭಾ ತೆಲಸಂಗ ಬಹುಮಾನ ಪಡೆದರು. ಸುಮಾ ಕಿತ್ತೂರ ಅಧ್ಯಕ್ಷತೆ ವಹಿಸಿದ್ದರು. ವಾಸಂತಿ ಮೇಳೆದ, ಕಲ್ಪನಾ ಪಟ್ಟಣ, ಶಾಂತಾ ಕಬ್ಬೂರ ಮಾತನಾಡಿದರು. ಶಾಂತಾ ಕಬ್ಬೂರ ಹಾಗೂ ಸುಮಿತ್ರಾ ಮಲ್ಲಾಪೂರ ಲೇಖಕಿಯರ ಸಂಘಕ್ಕೆ ಧ್ವನಿವರ್ಧಕ ದಾನವಾಗಿ ಕೊಟ್ಟರು. ಹೀರಾ ಚೌಗಲೆ, ಜಯಶ್ರೀ ನಿರಾಕಾರಿ, ಪ್ರೇಮಾ ಪಾನಶೆಟ್ಟಿ, ಕಲ್ಪನಾ ಪಟ್ಟಣ, ಸುನಂದಾ ಎಮ್ಮಿ, ನೀಲಗಂಗಾ ಚರಂತಿಮಠ, ಲಲಿತಾ ಕೋಪರ್ಡೆ, ಹಮೀದಾ ಬೇಗಂ ದೇಸಾಯಿ, ಶೋಭಾ ಬನಶಂಕರಿ, ಜ್ಯೋತಿ ಬದಾಮಿ, ರತ್ನಪ್ರಭಾ ಬೆಲ್ಲದ, ಜಯಶೀಲಾ ಬ್ಯಾಕೋಡ ಇತರರಿದ್ದರು.