ಜಿಲ್ಲೆ

ತುರ್ತು ಪರಿಸ್ಥಿತಿಯಲ್ಲಿ 2 ಸಾವಿರ ಮಂದಿ ಬಲಿದಾನ

ಗೋಪಾಲಕೃಷ್ಣ ಪಾದೂರ್

ಉಡುಪಿ: ಸಂವಿಧಾನದಲ್ಲಿ ದೇಶದ ರಕ್ಷಣೆಗಾಗಿ ಇರುವ ಅವಕಾಶವನ್ನು ಸ್ವಂತ ಹಿತಾಸಕ್ತಿಗಾಗಿ ಬಳಸಿಕೊಂಡ ಅಂದಿನ ಪ್ರಧಾನಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದರು. ಈ ಕರಾಳ ಶಾಸನದಿಂದಾಗಿ ಕರ್ನಾಟಕದ ಜೈಲಿನಲ್ಲಿ 5 ಮಂದಿ ಸೇರಿದಂತೆ ದೇಶಾದ್ಯಂತ ಒಟ್ಟು 2 ಸಾವಿರ ಮಂದಿ ಸಾವನ್ನಪ್ಪಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಕಚೇರಿಯಲ್ಲಿ ನಡೆದ 'ಸಂವಿಧಾನ್​ ಹತ್ಯಾ ದಿವಸ್​' (ತುರ್ತು ಪರಿಸ್ಥಿತಿಯ ಕರಾಳ ದಿನ) ಆಚರಣೆಯಲ್ಲಿ ಅವರು ಮಾತನಾಡಿದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ 36,000 ಮುಖಂಡರನ್ನು ಜೈಲಿಗಟ್ಟಲಾಗಿತ್ತು. ಪೊಲೀಸ್​ ದೌರ್ಜನ್ಯ ಮಿತಿಮೀರಿತ್ತು. ಪಾರ್ಲಿಮೆಂಟ್​ ಮತ್ತು ವಿಧಾನಸೌಧ ಸರ್ವಾಧಿಕಾರಿಗಳ ಆಟದ ಅಂಗಳವಾಗಿತ್ತು. ಕಾಂಗ್ರೆಸಿಗರು ಕಾನೂನನ್ನು ಕತ್ತೆ ಮಾಡಿದ್ದರು. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಮತ್ತು ಜನಾಂಗ ತೊಂದರೆ ಸಿಲುಕಿಕೊಂಡಿತ್ತು. ಪತ್ರಿಕಾ ಸ್ವಾತಂತ್ರ$್ಯ ಹರಣವಾಗಿತ್ತು. ಇಂಥ ದಿನ ಮತ್ತೆ ಬರಬಾರದು. ಈ ನಿಟ್ಟಿನಲ್ಲಿ ಯುವ ಜನಾಂಗ ಎಚ್ಚರವಹಿಸಬೇಕು ಎಂದರು.

ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಯಶ್ಪಾಲ್​ ಸುವರ್ಣ, ವಿಭಾಗ ಪ್ರಭಾರಿ ಉದಯ್​ ಕುಮಾರ್​ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ರೇಶ್ಮಾ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ ಉಪಸ್ಥಿತರಿದ್ದರು.