ಜಿಲ್ಲೆ

ಅಂಬೇಡ್ಕರ್ ಆದರ್ಶಗಳನ್ನು ಅವಳಡಿಸಿಕೊಳ್ಳಿ

ಪ್ರಸಿನ್ ಕೆ.ಆರ್

ಸರಗೂರು: ಸಮಾಜದ ಕಟ್ಟಕಡೆಯ ಪ್ರಜೆಗೂ ಶಾಸನ ರೂಪಿಸುವ ರಾಜಕೀಯದ ಹಕ್ಕು ಕೊಟ್ಟಿರುವ ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ಭೀಮ ಸೇನೆ ತಾಲೂಕು ಅಧ್ಯಕ್ಷ ಹೂವಿನಕೊಳ ಮಹೇಂದ್ರ ತಿಳಿಸಿದರು.

ತಾಲೂಕಿನ ಹೂವಿನಕೊಳ ಗ್ರಾಮದಲ್ಲಿ ಭಾನುವಾರ ಸಂಜೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಗೆ ಗ್ರಾಮದ ಯಜಮಾನರು ಹಾಗೂ ಮುಖಂಡರು ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಆಧ್ಯಾತ್ಮಿಕ ನಾಯಕರು. ಇವತ್ತು ಶೋಷಿತರು, ದಲಿತರು ಮುಖ್ಯ ವಾಹಿನಿಗೆ ಬರಲು ಅವರು ಕಾರಣಕರ್ತರು. ಅಂತಹವರ ಸ್ಮರಣೆ ಮಾಡುವುದು, ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಗ್ರಾಪಂ ಮಾಜಿ ಉಪಾಧ್ಯಕ್ಷ ಮತ್ತು ಸದಸ್ಯ ಎಚ್.ಡಿ.ಮಹೇಶ್ ಮಾತನಾಡಿ, ಭಾರತೀಯ ಸಂವಿಧಾನದ ಪಿತಾಮಹ ಎಂದು ವ್ಯಾಪಕವಾಗಿ ಕರೆಯಲ್ಪಡುವ ಡಾ. ಭೀಮ್ ರಾವ್ ಅಂಬೇಡ್ಕರ್, ಭಾರತೀಯ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು. ಭಾರತದ ಕಾನೂನು ಮತ್ತು ಸಾಮಾಜಿಕ ಚೌಕಟ್ಟನ್ನು ರೂಪಿಸುವಲ್ಲಿ ಅವರ ಕೊಡುಗೆಗಳು ದೇಶಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತಲೇ ಇವೆ. ಪ್ರತಿ ವರ್ಷ, ಅಂಬೇಡ್ಕರ್ ಜಯಂತಿ ಎಂದು ಕರೆಯಲ್ಪಡುವ ಅವರ ಜನ್ಮದಿನವನ್ನು ಭಾರತದಾದ್ಯಂತ ಬಹಳ ಹೆಮ್ಮೆ ಮತ್ತು ಗೌರವದಿಂದ ಆಚರಿಸಲಾಗುತ್ತದೆ. ಸಮಾನತೆ, ನ್ಯಾಯ ಮತ್ತು ಅಂಚಿನಲ್ಲಿರುವ ಸಮುದಾಯಗಳ ಹಕ್ಕುಗಳಿಗಾಗಿ ಅವರ ನಿರಂತರ ಹೋರಾಟವನ್ನು ಮಾಡಿಕೊಂಡು ಬಂದವರು ಅವರನ್ನು ಗೌರವಿಸುತ್ತದೆ ಎಂದರು.

ವಿವಿಧ ಪ್ರಮುಖ ಬೀದಿಗಳಲ್ಲಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಯನ್ನು ಪಲ್ಲಕ್ಕಿಯಲ್ಲಿ ಕೂರುಸಿಕೊಂಡು ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಮೆರವಣಿಗೆಯಲ್ಲಿ ಗ್ರಾಮದ ಯಜಮಾನರು ಪರಶಿವಮೂರ್ತಿ, ನಾಗರಾಜು,ಪಿಎಲ್‌ಡಿ ಬ್ಯಾಂಕ್ ಸದಸ್ಯ ಸಿದ್ದರಾಜು, ಮುಖಂಡರು ದೊಡ್ಡಯ್ಯ, ಬಸವಲಿಂಗಪ್ಪ, ರೈತ ಪ್ರತಾಪ್, ಶಿವಣ್ಣ, ವೆಂಕಟೇಶ್, ಚಂದ್ರ, ಸುನೀಲ್, ಪ್ರಕಾಶ್, ಸೋಮಣ್ಣ, ಸ್ವಾಮಿ, ಎಚ್.ಎನ್.ನಾಗೇಂದ್ರ, ಮಹದೇವಸ್ವಾಮಿ ಎಚ್ ಎಂ, ದೇವಿರಮ್ಮ, ಸಣ್ಣತಾಯಮ್ಮ, ರೇಣುಕಾ, ಕೆಂಪದೇವಮ್ಮ, ಶೀಲಾ, ಮಹದೇವಮ್ಮ, ಯುವಕರು ಬಳಗ ಹಾಗೂ ಮಹಿಳಾ ಸಂಘದ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.