ಜಿಲ್ಲೆ

ಅಂಬೇಡ್ಕರ್ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಿ

ಇಂದಿರಾ ಎನ್ ಕೆ

ಕುಂದಾಪುರ: ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಬೆಳೆಸಿಕೊಳ್ಳಬೇಕು. ಶಾಂತಿ, ಸೌಹಾರ್ದತೆ, ಸಹೋದರತೆಯನ್ನು ಮೈಗೂಡಿಸಿಕೊಂಡು ಸಂಘಟಿತ ಹೋರಾಟದ ಮೂಲಕ ಜಯ ಸಾಧಿಸಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಕ್ರಿಯವಾಗಿದ್ದುಕೊಂಡು ಸರ್ಕಾರ ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.

ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ 134ನೇ ಜನ್ಮ ದಿನಾಚರಣೆ ಪ್ರಯುಕ್ತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದ ಉಡುಪಿ ಜಿಲ್ಲಾ ಸಮಿತಿಯಿಂದ ಕುಂದಾಪುರದಲ್ಲಿ ಸೋಮವಾರ ನಡೆದ ‘ಭೀಮೋತ್ಸವ-2025’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಸಂಸ ಪ್ರಧಾನ ಸಂಚಾಲಕ ಟಿ.ಮಂಜುನಾಥ ಗಿಳಿಯಾರು ಮಾತನಾಡಿದರು. ಕೊರಗ ಸಮುದಾಯದ ಪರವಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಪೆರ್ನಾಲು ಸಮಗ್ರ ಗ್ರಾಮೀಣ ಆಶ್ರಮದ ಅಶೋಕ್ ಕುಮಾರ್ ಶೆಟ್ಟಿ ಅವರಿಗೆ ’ಭೀಮ ಸಾರಥಿ’ ಪ್ರಶಸ್ತಿಯನ್ನು ಕುಂದಾಪುರ ವಕೀಲರ ಸಂಘ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಪ್ರದಾನ ಮಾಡಿದರು.

ಕರ್ನಾಟಕ ದಸಂಸ ಅಂಬೇಡ್ಕರ್‌ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು.  ಅಶಕ್ತರಿಗೆ ನೆರವು, ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ನೀಡಲಾಯಿತು. ‘ಅರಿವೆ ಅಂಬೇಡ್ಕರ್’ ಪುಸ್ತಕ ಬಿಡುಗಡೆ ಮಾಡಲಾಯಿತು.  ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ತಾ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಮೌಲಾ, ಕುಂದಾಪುರ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ, ಪುರಸಭಾ ಸದಸ್ಯೆ ದೇವಕಿ ಸಣ್ಣಯ್ಯ, ಮಾಜಿ ಪುರಸಭಾಧ್ಯಕ್ಷೆ ಕಲಾವತಿ ರವಿಶಂಕರ್, ಸಮುದಾಯ ಸಂಘಟನೆಯ ಸದಾನಂದ ಬೈಂದೂರು, ದಸಂಸ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಜಿಲ್ಲಾ ಸಂಘಟನೆ ಸಂಚಾಲಕರಾದ ಶ್ಯಾಮಸುಂದರ್ ತೆಕ್ಕಟ್ಟೆ, ಸುರೇಶ್ ಹಕ್ಲಾಡಿ, ಮಂಜುನಾಥ ನಾಗೂರು, ರಾಜೇಂದ್ರನಾಥ್, ಅಣ್ಣಪ್ಪ ನಕ್ರೆ, ದೇವಣ್ಣ ಹೆಬ್ರಿ, ಭಾಸ್ಕರ ನಿಟ್ಟೂರು, ಕೊರಗ ಸಂಘಟನೆ ಮುಖಂಡರಾದ ಸುಶೀಲಾ ನಾಡ, ಕುಮಾರದಾಸ್ ಹಾಲಾಡಿ, ದಸಂಸ ಸಂಘಟನೆ ವಿವಿಧ ತಾಲೂಕು ಸಂಚಾಲಕರು, ಜಿಲ್ಲಾ ಸಮಿತಿ ಸದಸ್ಯರು ಇದ್ದರು.

ದಸಂಸ ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ.ರಾಜು ಬೆಟ್ಟಿನಮನೆ ಸ್ವಾಗತಿಸಿದರು. ರವಿ ಬನ್ನಾಡಿ ಸಂವಿಧಾನ ಪೀಠಿಕೆ ಬೋಧಿಸಿದರು. ಸಮೀಕ್ಷಾ ಹಕ್ಲಾಡಿ ಹೋರಾಟ ಗೀತೆ ಹಾಡಿದರು. ಶಂಭು ಗುಡ್ಡಮ್ಮಾಡಿ, ಚೈತ್ರಾ ಯಡ್ತರೆ ನಿರೂಪಿಸಿದರು. ಸುರೇಶ್ ಹಕ್ಲಾಡಿ ವಂದಿಸಿದರು.

ಅಂಬೇಡ್ಕರ್ ಅಪ್ರತಿಮ ದೇಶಭಕ್ತ. ಆದರೆ ಇಂದು ಸಮಾನತೆ, ಪ್ರಜಾಪ್ರಭುತ್ವ ವಿರೋಧಿಸುವ ಮನಸ್ಸುಗಳು ಅಂಬೇಡ್ಕರ್ ಅವರನ್ನು ಒಪ್ಪದೆ ಟೀಕಿಸುತ್ತಿವೆ. ನಾವುಗಳು ಸಂಘಟಿತರಾಗಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಟೀಕಾಕಾರರಿಗೆ ಅಂಬೇಡ್ಕರ್ ನಿಜದರ್ಶನ ಮಾಡಿಸಬೇಕು. -ಟಿ.ಮಂಜುನಾಥ ಗಿಳಿಯಾರು, ದಸಂಸ ಜಿಲ್ಲಾ ಪ್ರಧಾನ ಸಂಚಾಲಕ https://www.vijayavani.net/the-work-of-identifying-talents-is-commendable https://www.vijayavani.net/yaksha-trivali-yakshotsava-of-invited-teams