ಜಿಲ್ಲೆ

ಎಂಬಾರ್ ಭಾಷ್ಯಾಚಾರ್ಯ ಸ್ಮರಣೆ 18ರಂದು,  ವಿಶ್ವಶ್ರಮ ಚೇತನದಲ್ಲಿ ಪುಸ್ತಕ ಬಿಡುಗಡೆ

ಹುಬ್ಬಳ್ಳಿ: ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ, ಪ್ರಕಾಶಕರಾಗಿದ್ದ ಎಂಬಾರ್ ಭಾಷ್ಯಾಚಾರ್ಯರ 40ನೇ ವಾರ್ಷಿಕ ಸ್ಮರಣೆ ಹಾಗೂ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಮೇ 18ರಂದು ಮಧ್ಯಾಹ್ನ 12.15ಕ್ಕೆ ಇಲ್ಲಿಯ ಗೋಕುಲ ರಸ್ತೆ ವಿಶ್ವಶ್ರಮ ಚೇತನ ಆವರಣದ ಡಾ. ಕೆ.ಎಸ್. ಶರ್ಮಾ ಸಭಾಭವನದಲ್ಲಿ ಆಯೋಜಿಸಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳದ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕಾರ್ಮಿಕ ಹೋರಾಟಗಾರ, ಶಿಕ್ಷಣ ತಜ್ಞ ಡಾ. ಕೆ.ಎಸ್. ಶರ್ಮಾ ಅವರ ತಂದೆ ಎಂಬಾರ್ ಅವರಿಗೆ ಶ್ರದ್ಧಾ ಸಮರ್ಪಣೆ ಮಾಡಲಾಗುತ್ತದೆ.

ಆಪ್ತ ಶಿಷ್ಯ ಶರ್ಮಾ ಹಾಗೂ ಗುರುವರ್ಯ ಬೇಂದ್ರೆ ಇವರ ಬಾಂಧವ್ಯದ ಘಟನಾವಳಿಗಳ "ಬೆರಗುಗೊಳಿಸುವ ಪ್ರಸಂಗಗಳ ಮಹಾಬೆಳಗು' ಕುವಲಯನ ಜೀವನಾನುಭವಗಳ ಒಳನೋಟ ಹಾಗೂ ಡಾ. ಕೆ.ಎಸ್. ಶರ್ಮಾ ಸಂಗ್ರಹಿಸಿ ಅಭ್ಯಸಿಸಿದ ಪುಸ್ತಕ ಭಂಡಾರ ಕುವಲಯ ಪುಸ್ತಕ ಮನೆ ಉದ್ಘಾಟನೆ ನಡೆಯಲಿದೆ.

ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಮಾಜಿ ಸಚಿವ ಎಚ್. ವಿಶ್ವನಾಥ, ಪೂರ್ಣಚಂದ್ರ ಕನ್ನಡ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಕೆ.ಸಿ. ಶಿವಾರೆಡ್ಡಿ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಎನ್.ಬಿ. ಕುಲಕರ್ಣಿ, ವಿಶ್ರಾಂತ ಪ್ರಾಧ್ಯಾಪಕ ಕೆ.ಎಸ್. ಕೌಜಲಗಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಡಾ. ಕೆ.ಎಸ್. ಶರ್ಮಾ ಅಧ್ಯಕ್ಷತೆ ವಹಿಸುವರು.