ಜಿಲ್ಲೆ

ಗಿರಿ ಜಿಲ್ಲೆಯಲ್ಲಿ ಎಳ್ಳಮಾವಾಸ್ಯೆ ಹಬ್ಬದ ಸಂಭ್ರಮ

ಚರಗ ಚೆಲ್ಲಿ ಭೂತಾಯಿಗೆ ನಮಿಸಿದ ಕೃಷಿಕರು | ಎಲ್ಲ ದಾರಿಗಳು ರೈತರ ಹೊಲಗಳತ್ತ

ವಿಜಯವಾಣಿ ಸುದ್ದಿಜಾಲ ಯಾದಗಿರಿ

ಕೃಷಿಕರ ನಿಜವಾದ ಹಬ್ಬ ಈ ಎಳ್ಳಮಾವಾಸ್ಯೆ. ನಗರ ಸೇರಿ ಜಿಲ್ಲಾದ್ಯಂತ ರೈತರು ಸೋಮವಾರ ಹೊಲದಲ್ಲಿ ಚರಗ ಚೆಲ್ಲಿ ಭೂತಾಯಿಗೆ ನಮಿಸಿದರು. ಯಾದಗಿರಿ ಲುಂಬಿನಿ ವನ ಹಾಗೂ ವಿವಿಧ ಉದ್ಯಾನವನಗಳಲ್ಲಿ ಕುಟುಂಬಸಮೇತ ಮನೆಯಿಂದ ಸಿದ್ಧಪಡಿಸಿ ತಂದಿದ್ದ ಭಕ್ಷÈಗಳ ಭೋಜನ ಮಾಡಿ ಸಂಭ್ರಮಿಸಿದರು.

ಜನತೆ ಜೀಪ್, ಕಾರು, ಟ್ರಾÈಕ್ಟರ್ ಎತ್ತಿನ ಬಂಡಿಗಳ ಮೂಲಕ ವಿಶೇಷ ತಿಂಡಿ-ತಿನಿಸುಗಳೊAದಿಗೆ ತಮ್ಮ ಜಮೀನುಗಳಿಗೆ ತೆರಳಿ ಹೋಳಿಗೆ-ಅನ್ನಮಿಶ್ರಿತ ಪದಾರ್ಥವನ್ನು ಭೂತಾಯಿಗೆ ನೈವೇದ್ಯ ಆರ್ಪಿಸಿದರು. ನಗರ ಸುತ್ತಲಿನ ಯರಗೋಳ, ಹೊಸಳ್ಳಿ, ಮುಂಡರಗಿ, ಹೆಡಗಿಮದ್ರಾ, ರಾಮಸಮುದ್ರ ಹೀಗೆ ಅನೇಕ ಕಡೆ ಸಾವಿರಾರು ರೈತರು ಹೊಲಗಳಿಗೆ ಹೋಗಿ ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿದ್ದು ಕಂಡುಬAದಿತು.

ಮುದ್ನಾಳ್ ಉಮಲ್ಲಾ ನಾಯಕ ತಾಂಡಾ ರೈತ ವಿಜಯ ಜಮೀನಿನಲ್ಲಿ ಚರಗ ಚೆಲ್ಲಿ ಸಡಗರದಿಂದ ಎಳ್ಳ ಅಮಾವಾಸ್ಯೆ ಆಚರಿಸಲಾಯಿತು. ಪ್ರದೇಶ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ.ಮುದ್ನಾಳ್ ಮಾತನಾಡಿ, ಇದು ಅಪ್ಪಟ ದೇಸಿ ಆಹಾರ ಸಂಸ್ಕÈತಿಯ ಅಮಾವಾಸ್ಯೆ. ಪುರಾತನ ಕಾಲದಿಂದಲೂ ಹಿರಿಯರು ಮಾಡಿಕೊಂಡು ಬಂದ ಸಾಂಪ್ರದಾಯಿಕ ಹಬ್ಬವನ್ನು ಮುಂದುವರಿಸಿರುವುದು ಒಳ್ಳೆಯ ಬೆಳವಣಿಗೆ. ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗೆ ಚರಗ ಚೆಲ್ಲುವ ಮೂಲಕ ಭೂತಾಯಿಗೆ ಸ್ಮರಿಸುವ ವಿಶಿಷ್ಟ ಈ ಹಬ್ಬದಿಂದಾಗಿ ನೋವಿನಲ್ಲೂ ಸಂತಸಪಡುತ್ತಾರೆ ಎಂದರು.

ಗೋಪಾಲ, ಜೈರಾಮ, ಚಾಂಧಿಬಾಯಿ, ಹೆಮಲಿ ಬಾಯಿ, ಗನ್ನಿಬಾಯಿ, ಶಾಂತಿಬಾಯಿ, ಪೂರಿಬಾಯಿ, ದೇವಿಬಾಯಿ, ಜಮಲಿಬಾಯಿ, ಚಂದ್ರು, ರಾಜು, ಸೋನಿಬಾಯಿ, ಕರಿಬಾಯಿ, ಗಂಗಿಬಾಯಿ ಇತರರಿದ್ದರು.

ಗುರುಮಠಕಲï ತಾಲೂಕಿನ ಪ್ರತಿ ಹಳ್ಳಿಯಲ್ಲಿ ರೈತರು ಎತ್ತಿನಗಾಡಿ, ಟ್ರಾÈಕ್ಟರ್‌ಗಳನ್ನು ಅಲಂಕರಿಸಿ ತಮ್ಮ ಜಮೀನುಗಳಿಗೆ ತೆರಳಿ ಪೈರಿಗೆ ವಿಶೇಷ ಪೂಜೆ ಸಲ್ಲಿಸಿ ಸಿದ್ಧಪಡಿಸಿ ತಂದ ತಿಂಡಿ-ತಿನಿಸುಗಳನ್ನು ಜೋಳದ ಹೊಲದಲ್ಲಿ ನೈವೇದ್ಯ ಅರ್ಪಿಸಿದರು. ನಂತರ ಹೊಲದ ಮಧ್ಯೆ ಅಡುಗೆಯನ್ನು ಚರಗ ಚೆಲ್ಲುವ ಮೂಲಕ ಭೂತಾಯಿಗೆ ನಮಿಸಿ ಫಸಲು ಚೆನ್ನಾಗಿ ಬರಲಿ ಎಂದು ಪ್ರಾರ್ಥಿಸಿದರು.

ಜೋಳದ ತೆನೆಯೊಂದಿಗೆ ಮನೆ ಪ್ರವೇಶ

ಒಕ್ಕಲಿಗನ ಸಂಭ್ರಮದ ಈ ಹಬ್ಬದಂದು ಶೇಂಗಾ ಹಿಂಡಿ, ಅಗಸಿ ಹಿಂಡಿ, ಹಿಂಡಿ ಪಲ್ಯ, ಪುಂಡಿ ಪಲ್ಯ, ಗಟ್ಟಿಬ್ಯಾಳಿ, ಹೋಳಿಗೆ, ಅನ್ನ, ಸಾಂಬಾರು ಹೀಗೆ ವಿವಿಧ ಬಗೆಯ ಖಾದ್ಯ ತಯಾರಿಸಿ ಹೊಲಗಳಿಗೆ ತೆರಳಿ ಚರಗ ಚೆಲ್ಲುತ್ತಲೇ ವಿಶೇಷವಾಗಿ ಜೋಳದ ಹೊಲದಲ್ಲಿ ಮಕ್ಕಳು ಹಾಗೂ ಬಂಧು ಬಳಗದವರೊಂದಿಗೆ ಸೇರಿ ವಿಶೇಷ ಭೋಜನ ಸವಿದರು. ಗೋಧೂಳಿ ಸಮಯಕ್ಕೆ ಮರಳಿ ಮನೆಗೆ ತಲುಪಿದರು. ಮನೆ ಮುಖ್ಯದ್ವಾರ ಹೊಸ್ತಿಲಿಗೆ ನಮಸ್ಕರಿಸಿ ಬಲಗಾಲಿಟ್ಟು ಜೋಳದ ತೆನೆಯೊಂದಿಗೆ ಒಳಪ್ರವೇಶಿಸಿದರು.