ದೇವಗಂಗೆ ಶ್ರೀ ಗಂಗಾಧರೇಶ್ವರ ಸನ್ನಿಧಿಯಲ್ಲಿ ಸೇರಿದ್ದ ಭಕ್ತ ಸಮೂಹ.  
ಜಿಲ್ಲೆ

ಎಳ್ಳಮಾವಾಸ್ಯೆ: ದೇವಗಂಗೆಯಲ್ಲಿ ತೀರ್ಥಸ್ನಾನ

Shivamogga - Desk - Vinayakumar D B

ಹೊಸನಗರ: ತಾಲೂಕಿನ ಇತಿಹಾಸ ಪ್ರಸಿದ್ಧ ದೇವಗಂಗೆ ಶ್ರೀ ಗಂಗಾಧರೇಶ್ವರ ಸನ್ನಿಧಿಯಲ್ಲಿ ಸಡಗರದಿಂದ ಎಳ್ಳಮಾವಾಸ್ಯೆ ಜಾತ್ರೆ ಆಚರಿಸಲಾಯಿತು. ಗುರುವಾರ ಮುಂಜಾನೆ 3ರಿಂದಲೇ ಭಕ್ತರು ಸರದಿ ಸಾಲಲ್ಲಿ ನಿಂತು ದೇವಗಂಗೆ ಕೊಳದಲ್ಲಿ ಮಿಂದು ಗಂಗಾಧರೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು.

ರುದ್ರಾಭಿಷೇಕ, ವಿವಿಧ ಅರ್ಚನೆ, ಗಣಪತಿ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ಮಹಾಮಂಗಳಾರತಿ ಬಳಿಕೆ ಭಕ್ತರಿಗೆ ಉಪಾಹಾರ ವಿತರಿಸಲಾಯಿತು. ಡಾ. ಜಯಂತ್ ಬಾದಾಮಿ, ಕಲಾವತಿ ಜಯಂತ್, ಬಸವರಾಜಪ್ಪ ಗೌಡಪ್ಪನ್ ನೇತೃತ್ವದಲ್ಲಿ ಭಕ್ತಿ ಲಹರಿ ಕಾರ್ಯಕ್ರಮ ನಡೆಯಿತು.

ದೇವಗಂಗೆ ಚಂದ್ರಶೇಖರ್ ಶೆಟ್ಟಿ, ನಿತಿನ್ ನಗರ, ಹಿಂದೆ ದೊಡ್ಡ ಮಟ್ಟದಲ್ಲಿ ದೇವಗಂಗೆ ಎಳ್ಳಮಾವಾಸ್ಯೆ ಜಾತ್ರೆ ನಡೆಯುತ್ತಿತ್ತು. ಇಲ್ಲಿನ ಜಾತ್ರೆ ಜಿಲ್ಲೆಯಲ್ಲೇ ಪ್ರಸಿದ್ಧಿ ಪಡೆದಿತ್ತು. ಮುಳುಗಡೆ ನಂತರ ಜಾತ್ರೆ ಕಳೆಗುಂದಿದೆ. ಈ ವರ್ಷದಿಂದ ಗ್ರಾಮಸ್ಥರ ಸಹಕಾರದಿಂದ ಜಾತ್ರೆಗೆ ಹಿಂದಿನ ಮೆರುಗು ನೀಡಲು ನಿರ್ಧರಿಸಿದ್ದು, ಈ ಬಾರಿ ವಿಶೇಷವಾಗಿ ಆಚರಿಸಲಾಗಿದೆ ಎಂದರು.