ಜಿಲ್ಲೆ

ಮುಂದುವರಿದ ಕಾಡಾನೆ ದಾಳಿ, ಅಡಕೆ, ತೆಂಗಿನ ಮರ ಧ್ವಂಸ

Dakshina Kannada

ಸುಳ್ಯ: ತಾಲೂಕಿನ ನಾಲ್ಕೂರು ಗ್ರಾಮದ ಮೆಟ್ಟಿನಡ್ಕ ಸಾಲ್ತಾಡಿಯಲ್ಲಿ ಲಕ್ಷ್ಮೀನಾರಾಯಣ ಪೂಂದ್ರುಕೋಡಿ ಅವರ ತೋಟಕ್ಕೆ ಶನಿವಾರ ರಾತ್ರಿ ಆನೆಗಳ ಹಿಂಡು ದಾಳಿ ಮಾಡಿ ಕೃಷಿ ಹಾನಿ ಮಾಡಿವೆ. 4 ತೆಂಗಿನಮರ, ಹಲವು ಅಡಕೆ ಗಿಡಗಳನ್ನು ನಾಶ ಮಾಡಿದೆ. ಸನಿಹದ ಕೆಲ ತೋಟಗಳಿಗೂ ಆನೆ ದಾಳಿ ಮಾಡಿ ಕೃಷಿ ಹಾನಿ ಮಾಡಿದೆ