ತಿ ನರಸೀಪುರ ತಾಲೂಕಿನ ಟಿ. ಬೆಟ್ಟಹಳ್ಳಿ ಗ್ರಾಮದಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾದರಿ ಗ್ರಾಮ ವಿದ್ಯುತ್ ಯೋಜನೆ ಕಾಮಗಾರಿಗಳಿಗೆ ಭೂಮಿಪೂಜೆ ಸಲ್ಲಿಸಿ ಚಾಲನೆ ನೀಡಿದರು. ಜಿ.ಲಕ್ಷ್ಮಿಕಾಂತ್ ರೆಡ್ಡಿ, ಸುನೀಲ್ ಕುಮಾರ್, ಆನಂದ್, ಪುಟ್ಟಮ್ಮ ಶಂಭುಲಿಂಗ, ಕುಕ್ಕುರು ಗಣೇಶ್, ಎಂ.ಡಿ. ಬಸವರಾಜು, ದಕ್ಷಿಣಾಮೂರ್ತಿ ಇತರರು ಇದ್ದರು 
ಜಿಲ್ಲೆ

ಗ್ರಾಮೀಣ ಭಾಗದಲ್ಲಿ ವಿದ್ಯುತ್ ಬವಣೆ ನೀಗಿಸಿ

ತಿ.ನರಸೀಪುರ: ಶಿಥಿಲ ವಿದ್ಯುತ್ ಕಂಬಗಳನ್ನು ಬದಲಾಯಿಸಿ, ಅಗತ್ಯವಿರುವೆಡೆ ಟ್ರಾನ್ಸ್ ಫಾರ್ಮರ್‌ಗಳನ್ನು ಅಳವಡಿಸಿ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಬವಣೆ ನೀಗಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೆಸ್ಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಿನ ಟಿ.ಬೆಟ್ಟಹಳ್ಳಿ ಗ್ರಾಮದಲ್ಲಿ ಶನಿವಾರ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಮಾದರಿ ಗ್ರಾಮ ವಿದ್ಯುತ್ ಯೋಜನೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಶಿಥಿಲ ವಿದ್ಯುತ್ ಕಂಬಗಳನ್ನು ತೆಗೆದು ಬೇರೆ ಕಂಬಗಳನ್ನು ಅಳವಡಿಸಿ, ಮರ ಗಿಡಗಳ ಬಳಿ ವಿದ್ಯುತ್ ತಂತಿಗಳು ನೇತಾಡುತ್ತಿದ್ದರೆ ಅವುಗಳನ್ನು ತೆರವುಗೊಳಿಸಿ ಸುರಕ್ಷಿತ ವಿಧಾನದಲ್ಲಿ ವಿದ್ಯುತ್ ಕಾಮಗಾರಿಗಳನ್ನು ಕೈಗೊಳ್ಳಿ ಎಂದು ತಾಕೀತು ಮಾಡಿದರು.

ಸೆಸ್ಕ್ ಇಇ ಆನಂದ್ ಮಾತನಾಡಿ, ಮಾದರಿ ಗ್ರಾಮ ಯೋಜನೆಯಡಿ 2.50 ಕೋಟಿ ರೂ. ವೆಚ್ಚದಲ್ಲಿ ಟಿ. ಬೆಟ್ಟಹಳ್ಳಿ ಸೇರಿದಂತೆ ಕಲಿಯೂರು, ಮೂಗೂರು, ವ್ಯಾಸರಾಜಪುರ ಮತ್ತು ಬಿ.ಸೀಹಳ್ಳಿ ಗ್ರಾಮಗಳ ಸೆಸ್ಕ್ ಗೆ ಸಂಬಂಧಿಸಿದ ಎಲ್‌ಟಿ, ಎಚ್‌ಟಿ ಲಿಂಕ್ ಲೈನ್ ನಿರ್ಮಾಣ, ಹೆಚ್ಚುವರಿ 25 ಕೆವಿ ಎ ಪರಿವರ್ತಕ ಅಳವಡಿಕೆ, ಜೋತು ಬಿದ್ದಿರುವ ವಿದ್ಯುತ್ ಮಾರ್ಗಗಳ ದುರಸ್ಥಿ, ಮಧ್ಯಂತರ ವಿದ್ಯುತ್ ಕಂಬಗಳ ಎಲ್‌ಟಿ ವಿದ್ಯುತ್ ಮಾರ್ಗಗಳ ಮರು ಜೋಡಣೆ, ವೈರ್‌ಗಳ ಬದಲಾವಣೆ, ಬೀದಿ ದೀಪಗಳಿಗೆ ಟೈಮರ್ ಮತ್ತು ಬಾಕ್ಸ್ ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ಎಸ್‌ಪಿ ವಿಷ್ಣುವರ್ಧನ, ಜಿಪಂ ಸಿಇಒ ಯುಕೇಶ್ ಕುಮಾರ್, ಸೆಸ್ಕ್ ಎಸ್‌ಇ ಸುನೀಲ್ ಕುಮಾರ್, ಇಇಗಳಾದ ಆನಂದ್, ತಿಪ್ಪಾರೆಡ್ಡಿ, ಜಿ.ರಾಜು, ಎಇಇಗಳಾದ ವೀರೇಶ್, ಸತೀಶ್ ಚಂದ್ರನ್, ಪಿ.ಎನ್.ಚರಿತಾ, ಪಿಡಿಒ ಕೆಂಪೇಗೌಡ, ತಹಸೀಲ್ದಾರ್ ಸುರೇಶ್ ಆಚಾರ್, ಸಮಾಜ ಕಲ್ಯಾಣಾಧಿಕಾರಿ ರಾಮೇಗೌಡ, ಶೆಟ್ಟಹಳ್ಳಿ ಗ್ರಾಪಂ ಅಧ್ಯಕ್ಷೆ ಪುಟ್ಟಮ್ಮ ಶಂಭು, ಉಪಾಧ್ಯಕ್ಷ ದಕ್ಷಿಣಮೂರ್ತಿ ಅರಣ್ಯಧಿಕಾರಿ ಯಮುನಾ, ರಾಜೇಶ್, ಜಿಪಂ ಮಾಜಿ ಸದಸ್ಯೆ ಎಂ.ಸುಧಾ ಮಹದೇವಯ್ಯ, ತಾಪಂ ಯೋಜನಾಧಿಕಾರಿ ರಂಗಸ್ವಾಮಿ, ನರೇಗಾ ಸಹಾಯಕ ನಿರ್ದೇಶಕ ಶಶಿಕುಮಾರ್, ಕೃಷಿ ಎ.ಡಿ ಸುಹಾಸಿನಿ, ಕೃಷಿ ಅಧಿಕಾರಿ ಕಾವ್ಯ, ತಾಪಂ ಮಾಜಿ ಸದಸ್ಯರಾದ ಕುಕ್ಕೂರು ಗಣೇಶ್, ರಾಮಲಿಂಗಯ್ಯ, ನರಸಿಂಹ ಮಾದನಾಯಕ, ಮಲ್ಲಾಜಮ್ಮ, ಕೋಕಿಲಾ, ಬ್ಲಾಕ್ ಅಧ್ಯಕ್ಷ ಎಂ.ಡಿ.ಬಸವರಾಜು, ಹಿಂದುಳಿದ ವರ್ಗಗಳ ಅಧ್ಯಕ್ಷ ಎ.ಎನ್.ಸ್ವಾಮಿ, ನಿವೃತ್ತ ಮುಖ್ಯ ಲೆಕ್ಕಾಧಿಕಾರಿ ಮಾಲಂಗಿ ಜೆ.ಶಿವಸ್ವಾಮಿ, ಮುಖಂಡರಾದ ಗೋಪಾಲ್, ಶಂಭುಲಿಂಗ, ಶಾಂತರಾಜು ಇತರರಿದ್ದರು.

.