ಜಿಲ್ಲೆ

ಇಎಲ್​ಐ ಮೂಲಕ 20 ಸಾವಿರ ಹೊಸ ಉದ್ಯೋಗ ಸೃಷ್ಟಿ ಗುರಿ

ಗೋಪಾಲಕೃಷ್ಣ ಪಾದೂರ್

ಉಡುಪಿ: ಉತ್ಪಾದನಾ ವಲಯಗಳಲ್ಲಿ ಉದ್ಯೋಗಾವಕಾಶ ಮತ್ತು ಸಾಮಾಜಿಕ ಭದ್ರತೆಯನ್ನು ಹೆಚ್ಚಿಸಲು ಉದ್ಯೋಗ ಸಂಬಂಧಿತ ಪ್ರೋತ್ಸಾಹ ಧನ (ಇಎಲ್​ಐ) ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಆ.1ರಿಂದ ಜಾರಿಗೆ ಬರಲಿದೆ.ಯೋಜನೆ ಮೂಲಕ ಜಿಲ್ಲೆಯಲ್ಲಿ 20 ರಿಂದ 25 ಸಾವಿರ ಹೊಸ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಇಪಿಎ್​ಐ ವಲಯ ಆಯುಕ್ತ ಶಶಿಕಾಂತ್​ ದಹಿಯಾ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಯಡಿಯಲ್ಲಿ, ಮೊದಲ ಬಾರಿಗೆ ಉದ್ಯೋಗಿಗಳು ಒಂದು ತಿಂಗಳ ವೇತನ (15,000 ರೂ.ವರೆಗೆ) ಸರ್ಕಾರ 2 ಕಂತಿನ ಮೂಲಕ 2 ವರ್ಷ ಪಾವತಿ ಮಾಡಲಿದೆ. ಹೆಚ್ಚುವರಿ ಉದ್ಯೋಗ ಸೃಷ್ಟಿಸಲು ಉದ್ಯೋಗದಾತರಿಗೆ ಎರಡು ವರ್ಷಗಳವರೆಗೆ ಪ್ರತಿ ತಿಂಗಳು 3 ಸಾವಿರ ರೂ.ವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಉತ್ಪಾದನಾ ವಲಯಕ್ಕೆ 4 ವರ್ಷಗಳವರೆಗೆ ಯೋಜನೆ ಪ್ರಯೋಜನ ಸಿಗಲಿದೆ. ಈ ಯೋಜನೆಯ ಪ್ರಯೋಜನಗಳುಆಗಸ್ಟ್​ ರಿಂದ ಜುಲೈ 31, 2027ರ ನಡುವೆಸೃಷ್ಟಿಯಾದಉದ್ಯೋಗಗಳಿಗೆ ಅನ್ವಯವಾಗುತ್ತವೆ ಎಂದರು.

ಪರಿವರ್ತನಾಧಿಕಾರಿ ಸುನೀಲ್​ ರಾವ್​ ಮಾತನಾಡಿ, ಇಪಿಎಫ್​ಒದಲ್ಲಿ ನೋಂದಾಯಿಸಲ್ಪಟ್ಟ 50 ಕ್ಕಿಂತ ಕಡಿಮೆ ಉದ್ಯೋಗಿಗಳಿರುವ ಸಂಸ್ಥೆಗಳು ಕನಿಷ್ಠ ಇಬ್ಬರು ಹೆಚ್ಚುವರಿ ಉದ್ಯೋಗಿಗಳನ್ನು ಹಾಗೂ 50ಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳು ಕನಿಷ್ಠ 5 ಮಂದಿಯನ್ನು ನೇಮಿಸಿಕೊಳ್ಳಬೇಕಾಗುತ್ತದೆ.ಮೊದಲ ಬಾರಿಯ ಉದ್ಯೋಗಿಗಳಿಗೆ ಎಲ್ಲಾ ಪಾವತಿಗಳನ್ನು ಆಧಾರ್​ ಬ್ರಿಡ್ಜ್​ ಪಾವತಿ ವ್ಯವಸ್ಥೆ (ಎಬಿಪಿಎಸ್​) ಬಳಸಿಕೊಂಡು ಡಿಬಿಟಿ (ನೇರ ಪ್ರಯೋಜನ ವರ್ಗಾವಣೆ) ಮೂಲಕ ಸಹಾಯಧನ ಪಾವತಿಸಲಾಗುತ್ತದೆ. ಉದ್ಯೋಗದಾತರಿಗೆ ನೇರವಾಗಿ ಪ್ಯಾನ್​-ಲಿಂಕ್ಡ್​ ಖಾತೆಗಳಿಗೆ ಹಣ ಜಮೆಯಾಗಲಿದೆ. ಜಿಲ್ಲೆಯಲ್ಲಿ 3,400 ಕೈಗಾರಿಕಾ ಸಂಸ್ಥೆಗಳು ಕಾರ್ಯಾಚರಿಸುತ್ತಿದ್ದು, 1.03 ಲಕ್ಷ ಉಡ್ಯೋಗಿಗಳು ಇಪಿಎ್​ ಯೋಜನೆಯಡಿ ನೋಂದಾಯಿಸಲ್ಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು. ಲೇಖಾಧಿಕಾರಿ ರಾಜೀವ್​ ರ, ಲೆಕ್ಕಾಧಿಕಾರಿ ಸಂತೋಷ್​ ಉಪಸ್ಥಿತರಿದ್ದರು.