ಜಿಲ್ಲೆ

VIDEO| ಪೊಲೀಸ್​ ಠಾಣೆ ಎದುರಿನ ಚೆಕ್​ಪೋಸ್ಟ್​ ಗೇಟ್​​ ತೆಗೆದು ತೋಟಕ್ಕೆ ನುಗ್ಗಿದ ಕಾಡಾನೆ!

ಕೊಡಗು: ಜಿಲ್ಲೆಯಲ್ಲಿ ಕಾಡಾನೆಗಳು ನಾಡಿಗೆ ಲಗ್ಗೆಯಿಡುವುದು, ಜನರ ಮೇಲೆ ದಾಳಿ ನಡೆಸುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ಕಾಡಾನೆ ಚೆಕ್​​ಪೋಸ್ಟ್ ಗೇಟ್ ತೆಗೆದು ರಸ್ತೆಯ ಮೂಲಕ ತೋಟದೊಳಗೆ ಪ್ರವೇಶ ಮಾಡಿದೆ.

ವೀರಾಜಪೇಟೆ ತಾಲ್ಲೂಕಿನ ಕುಟ್ಟಾ ಪೊಲೀಸ್ ಠಾಣೆಯ ಎದುರು ಇರುವ ಚೆಕ್ ಪೋಸ್ಟ್ ಮೂಲಕ ಆಗಮಿಸಿದ ಆನೆ ಗೇಟನ್ನು ತೆಗೆಯುವ ಮೂಲಕ ತೋಟಕ್ಕೆ ಸಾಗಿದೆ.

ಇದು ಪೊಲೀಸ್ ಠಾಣೆಯಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಧ್ಯರಾತ್ರಿ 12.30 ಗಂಟೆಗೆ ಕಾಡಾನೆ ಆಗಮಿಸಿದೆ. ಆದರೆ ಗೇಟ್​ಗೆ ಯಾವುದೇ ಹಾನಿ ಮಾಡಿಲ್ಲ. (ದಿಗ್ವಿಜಯ ನ್ಯೂಸ್​)