ಜಿಲ್ಲೆ

ನಲಪಾಡ್ ಮಾಲೀಕತ್ವದ ಎಸ್ಟೇಟ್ ಚೆಲ್ಲಾಪಿಲ್ಲಿ; ಕಾಫಿ ಗಿಡಗಳೆಲ್ಲ ಧ್ವಂಸ

ಹಾಸನ: ಇಲ್ಲಿಗೆ ಸಮೀಪದಲ್ಲಿರುವ ನಲಪಾಡ್ ಎಸ್ಟೇಟ್‌ನ ಬೇಲಿ ಕಿತ್ತೆಸೆದು ಕಾಡಾನೆಗಳ ಹಿಂಡು ದಾಂಧಲೆ ನಡೆಸಿದೆ.

ಸಕಲೇಶಪುರ ತಾಲೂಕು ಸೋಮವಾರಪೇಟೆ-ಬೇಲೂರು ರಾಜ್ಯ ಹೆದ್ದಾರಿಯ ಪಕ್ಕದ ಹೊಸಗದ್ದೆಯಲ್ಲಿ ಈ ನಲಪಾಡ್ ಎಸ್ಟೇಟ್ ಇದೆ. ಕಾಂಗ್ರೆಸ್ ಶಾಸಕ ಮಹಮದ್ ಹ್ಯಾರಿಸ್ ಮತ್ತು ರಾಜ್ಯ ಯುವ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ನಲಪಾಡ್ ಮಾಲೀಕತ್ವದ ಎಸ್ಟೇಟ್ ಇದು.

ಕಳೆದ ರಾತ್ರಿ ಬೇಲಿ ಕಿತ್ತು ಒಳನುಗ್ಗಿರುವ ಆನೆಗಳ ಹಿಂಡು ಅಲ್ಲಿದ್ದ ಕಾಫಿ ಗಿಡಗಳನ್ನು ನಾಶ ಮಾಡಿದೆ. ಆನೆಗಳು ಬೆಳಗ್ಗೆಯಿಂದ ತೋಟದಲ್ಲೇ ವಿಶ್ರಾಂತಿ ಪಡೆಯುತ್ತಿವೆ.