ಸುಳ್ಯ: ಮಂಡೆಕೋಲು ಗ್ರಾಮದಲ್ಲಿ ಮತ್ತೆ ಆನೆಗಳ ಉಪಟಳ ಮುಂದುವರಿದಿದ್ದು ಶುಕ್ರವಾರ ರಾತ್ರಿ ವೇಳೆ ಬೊಳುಗಲ್ಲು ಭಾಗದ ಕೃಷಿಕರ ತೋಟಕ್ಕೆ ನುಗ್ಗಿ ಬೆಳೆಗಳನ್ನು ಪುಡಿಗೈದಿವೆ.
ಬೊಳುಗಲ್ಲಿನ ಚಾಕೋಟೆ ಜಗದೀಶ್ ನಾಯಕ್ ಅವರ ತೋಟಕ್ಕೆ ಕಾಡಾನೆಗಳು ನುಗ್ಗಿ ಅಡಕೆ ಹಾಗೂ ಬಾಳೆಗಿಡಗಳನ್ನು ಧ್ವಂಸಗೈದಿವೆ. ನೀರಿಗಾಗಿ ಅಳವಡಿಸಲಾದ ಪೈಪ್‌ಗಳಿಗೆ ಕೂಡಾ ಹಾನಿಯಾಗಿದೆ.