ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮದಲ್ಲಿ ಕಾಣಿಸಿಕೊಂಡ ಕಾಡಾನೆ. 
ಜಿಲ್ಲೆ

ಕಾಡಾನೆ ದಾಳಿಗೆ ಯುವಕ ಬಲಿ

ಎ. ಆರ್. ರಘುರಾಮ

ಮಡಿಕೇರಿ : ಮಡಿಕೇರಿ ತಾಲೂಕು ಭಾಗಮಂಡಲ ಹೋಬಳಿ ಚೇರಂಗಾಲ ಗ್ರಾಮದ ಸಮೀಪ ಕಾಡಾನೆ ದಾಳಿಗೆ ಯುವಕನೊಬ್ಬ ಬಲಿಯಾಗಿದ್ದಾನೆ. ಚೇರಂಗಾಲ ನಿವಾಸಿ ಮತ್ತಾರಿ ಕರುಣಾಕರ ಮೃತ. ತಲಕಾವೇರಿ ವನ್ಯಧಾಮ ವ್ಯಾಪ್ತಿಯ ಅರಣ್ಯದಲ್ಲಿ ಮಂಗಳವಾರ ಈತ ಇಬ್ಬರು ಸ್ನೇಹಿತರ ಜತೆ ಪೊರಕೆಯ ಕಚ್ಛಾ ವಸ್ತು ಸಂಗ್ರಹಕ್ಕೆ ತೆರಳಿದ್ದ. ಆಗ ಕಾಡಾನೆ ದಾಳಿಗೆ ಅಸುನೀಗಿದ್ದಾನೆ. ಇವನೊಡನೆ ಇದ್ದ ಇಬ್ಬರು ಕಾಡಾನೆಯಿಂದ ತಪ್ಪಿಸಿಕೊಂಡು ಓಡಿ ಬದುಕಿ ಉಳಿದಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಭಾಗಮಂಡಲ ಪೊಲೀಸರ ಭೇಟಿ ನೀಡಿ ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.