ಮಡಿಕೇರಿ:
ಪಾಲಿಬೆಟ್ಟ ಬಳಿ ಆನೆ ದಾಳಿಗೆ ಸಿಲುಕಿದ್ದ ಕಾರ್ಮಿಕ ಬಾಬಿ (೫೭) ಚಿಕಿತ್ಸೆ ಫಲಕಾರಿ ಆಗದೆ ಗುರುವಾರ ಮೃತರಾಗಿದ್ದಾರೆ. ೨ ದಿನಗಳ ಹಿಂದೆ ಪಾಲಿಬೆಟ್ಟ ಸಮೀಪದ ಮಸ್ಕಲ್ ಬಳಿಯ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಬಾಬಿ ಮೇಲೆ ಕಾಡಾನೆ ದಾಳಿ ಮಾಡಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಬಾಬಿ ಮೃತಪಟ್ಟಿದ್ದಾರೆ.
ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಫೋನ್ ಮೂಲಕ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಕುಟುಂಬಸ್ಥರಿಗೆ ಕೂಡಲೇ ಪರಿಹಾರ ಕೊಡಬೇಕು ಮತ್ತು ಕಾಡಾನೆಯನ್ನು ತಕ್ಷಣ ಸೆರೆಹಿಡಿಯಬೇಕು ಎಂದು
ಆರಣ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಪೊನ್ನಣ್ಣ ನಿರ್ದೇಶನ ಹಿನ್ನೆಲೆಯಲ್ಲಿ ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ ಆಸ್ಪತ್ರೆಗೆ ತೆರಳಿ ಮೃತರ ಕುಟುಂಬಕ್ಕರ ಸಾಂತ್ವಮ ಹೇಳಿದರು. ಸರ್ಕಾರದಿಂದ ಬರಬೇಕಿರುವ ಎಲ್ಲಾ ಪರಿಹಾರಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಮಧ್ಯೆ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮುಂದುವರಿದಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಅರಣ್ಯ ಅಧಿಕಾರಿಗಳ ವಿರುದ್ದು ಸ್ಥಳೀಯರು ಸಿಟ್ಟಾಗಿದ್ದಾರೆ.