ಹುಬ್ಬಳ್ಳಿ: ಕರ್ನಾಟಕ ಇಲೆಕ್ಟೋ ಹೋಮಿಯೋಪತಿ ಫೌಂಡೇಷನ್ ವತಿಯಿಂದ ಇಲೆಕ್ಟೋ ಹೋಮಿಯೋಪಥಿ ವೃತ್ತಿನಿರತ ವೈದ್ಯರ ಸಮಾವೇಶನವನ್ನು ನಗರದ ಕೊಪ್ಪಿಕರ ರಸ್ತೆ ಹೋಟೆಲ್ ಮೆಟ್ರೋ ಪೊಲೀಸ್ ನಲ್ಲಿ ಅ. 26ರಂದು ಬೆಳಗ್ಗೆ 10ಕ್ಕೆ ಆಯೋಜಿಸಲಾಗಿದೆ.
ಎಂಎಲ್ಸಿ, ಮುಖ್ಯ ಸಚೇತಕ ಸಲೀಂ ಅಹ್ಮದ್ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ಪ್ರಸಾದ ಅಬ್ಬಯ್ಯ, ಎಂ.ಆರ್. ಪಾಟೀಲ, ಯಾಸೀರ್ ಖಾನ ಪಠಾಣ ಅತಿಥಿಗಳಾಗಿ ಪಾಲ್ಗೊಳ್ಳುವರು. ಫೌಂಡೇಷನ್ ರಾಷ್ಟ್ರೀಯ ಅಧ್ಯಕ್ಷ ಡಾ. ಪಿ.ಎಸ್. ಪಾಂಡೆ ಅಧ್ಯಕ್ಷತೆ ವಹಿಸುವರು.