ಜಿಲ್ಲೆ

ಹಿಂದಿನ ಸರ್ಕಾರದ ವಿದ್ಯುತ್ ದರ ಏರಿಕೆಯ ದಾಖಲೆ ತೋರಿಸಲಿ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ವಿದ್ಯುತ್ ಬೆಲೆ ಏರಿಕೆಗೆ ಹಿಂದಿನ ಬಿಜೆಪಿ ಸರ್ಕಾರ ಕಾರಣ ಎನ್ನುವ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು, ಆದೇಶಕ್ಕೆ ಪೂರಕವಾದ ಪತ್ರವನ್ನು ತೋರಿಸಲಿ ಎಂದು ಮಾಜಿ ಸಚಿವ ಆರ್.ಅಶೋಕ್ ಸವಾಲು ಹಾಕಿದರು.                                                        ಬಾಗೇಪಲ್ಲಿ ಪಟ್ಟಣದ ಕೊಂಡಂವಾರಪಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ ಏರಿಕೆಯಿಂದ ಎದುರಾಗುತ್ತಿರುವ ಜನರ ಆಕ್ರೋಶದ ಹಿನ್ನೆಲೆಯಲ್ಲಿ ಬಿಜೆಪಿ ಮೇಲೆ ಕಾಂಗ್ರೆಸ್ ಗೂಬೆ ಕೂರಿಸುತ್ತಿದೆ. ಹಿಂದಿನ ಸರ್ಕಾರದ ಆಡಳಿತಾವಧಿಯಲ್ಲಿ ತೀರ್ಮಾನ ಎಂಬುದಾಗಿ ನುಣುಚಿಕೊಳ್ಳಲಾಗುತ್ತಿದೆ. ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಂಧನ ಸಚಿವ ಸುನೀಲ್ ಕುಮಾರ್ ವಿದ್ಯುತ್ ಬೆಲೆ ಏರಿಕೆಗೆ ಸಹಿ ಹಾಕಿರುವ ಪತ್ರವನ್ನು ತೋರಿಸಲಿ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ಗೆ ಸವಾಲು ಹಾಕಿದರು.

ಕೇಂದ್ರ ಬಿಜೆಪಿ ಸರ್ಕಾರವು ಈಗಾಗಲೇ ಉಚಿತವಾಗಿ 5 ಕೆ.ಜಿ.ಅಕ್ಕಿ ನೀಡುತ್ತಿದೆ. ಕಾಂಗ್ರೆಸ್‌ಗೆ ಯೋಗ್ಯತೆ ಇದ್ದರೆ ಕೊಟ್ಟ ಮಾತಿನಂತೆ 5 ಕೆ.ಜಿ.ಅಕ್ಕಿ ಜತೆಗೆ ೧೦ ಕೆ.ಜಿ ಸೇರಿಸಿ 15 ಕೆ.ಜಿ ಅಕ್ಕಿ ಕೊಡಲಿ, ಅಕ್ಕಿ ಇಲ್ಲದಿದ್ದರೆ ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗೆ ಅಕ್ಕಿ ಖರೀದಿಯ ಹಣವನ್ನು ಜಮಾ ಮಾಡಲಿ, ಇದನ್ನು ಯಾರು ಬೇಡ ಅನ್ನುತ್ತಾರೋ ನೋಡೋಣ ಎಂದ ಅವರು, ಉಚಿತ ಬಸ್ ಪ್ರಯಾಣ ಅಂತಾ ಹೇಳಿ ಬಸ್‌ಗಳೇ ಇಲ್ಲದಂತೆ ಮಾಡಿ ಮಹಿಳೆಯರ ನಡುವೆ ಗಲಾಟೆಗಳು ಸೃಷ್ಟಿಸುತ್ತಿದ್ದೀರಾ ಎಂದು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.