ಜಿಲ್ಲೆ

ವಿದ್ಯುತ್​ ತಂತಿ ತಗುಲಿ ಯುವಕ ಸಾವು

Haveri - Kariyappa Aralikatti

ಬ್ಯಾಡಗಿ: ಜಮೀನಿನಲ್ಲಿ ವಿದ್ಯುತ್​ ತಗುಲಿ ಯುವಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಹಳೇ ಗುಂಗರಗೊಪ್ಪ ಗ್ರಾಮದಲ್ಲಿ ಭಾನುವಾರ ನಡೆದಿದೆ.

ವಿನಾಯಕ ಹನುಮಂತಪ್ಪ ಇಮ್ಮಡಿ (17) ಮೃತ ಯುವಕ.

ಈತ ಜಮೀನಿನಲ್ಲಿ ಬೋರ್​ವೆಲ್​ ಆನ್​ ಮಾಡಲು ಹೋದಾಗ ವಿದ್ಯುತ್​ ತಗುಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.