ಜಿಲ್ಲೆ

ವಿದ್ಯುತ್ ವ್ಯತ್ಯಯ ನಾಳೆ

Kopala - Desk - Eraveni

ಕಂಪ್ಲಿ: ಜೆಸ್ಕಾಂ 110/33/11ಕೆವಿ ಉಪ ಕೇಂದ್ರದಲ್ಲಿ ವಿದ್ಯುತ್ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುದರಿಂದ ಆ.24 ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಪಟ್ಟಣ ಮತ್ತು ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ನಿರಂತರ ಜ್ಯೋತಿ ಮಾರ್ಗಗಳಾದ ಎಫ್ 2- ಕಂಪ್ಲಿ, ಎಫ್ 3- ಕೈಗಾರಿಕಾ, ಎಫ್4- ಕಂಪ್ಲಿ-ಕೊಟ್ಟಾಲ್, ಎಫ್ 12- ಬಸವೇಶ್ವರನಗರ, ಎಫ್ 13- ಪ್ರಭುಕ್ಯಾಂಪ್, ಎಫ್ 6- ವಿದ್ಯಾಪೀಠ, ಎಫ್ 11-ಹಂಪಾದೇವನಹಳ್ಳಿ ವ್ಯಾಪ್ತಿ ಹಾಗೂ ಪಂಪ್‌ಸೆಟ್ ವಿದ್ಯುತ್ ಮಾರ್ಗಗಳಾದ ಎಫ್ 1- ದೇವಸಮುದ್ರ,

ಎಫ್ 5- ಜಾನೂರು, ಎಫ್ 7- ಸಣಾಪುರ, ಎಫ್ 8- ಕೆ.ತಿಮ್ಮಲಾಪುರ ಮತ್ತು 33 ಕೆವಿ ಉಪ ಕೇಂದ್ರದ ವ್ಯಾಪ್ತಿ ಮಾರ್ಗಗಳಾದ ಎಫ್ 4- ರಾಮಸಾಗರ, ಎಫ್ 5- ಗೌರಮ್ಮಕೆರೆ, ಎಫ್ 3- ಬೆಳಗೋಡುಹಾಳ್ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ವಿದ್ಯುತ್ ದುರಸ್ತಿ ಕಾರ್ಯ ಪೂರ್ವಾನುಮತಿ ಇಲ್ಲದೆ ಮಾಡಬಾರದು. ಒಂದು ವೇಳೆ ವಿದ್ಯುತ್ ಅವಘಡ ಸಂಭವಿಸಿದ್ದಲ್ಲಿ ಜೆಸ್ಕಾಂ ಕಂಪನಿ ಹೊಣೆಯಾಗುವುದಿಲ್ಲ ಎಂದು ಎಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.