ಹುಬ್ಬಳ್ಳಿ: ವೇಕ್ರಾಫ್ಟ್ ಸೋಲಾರ್, ಅದಾನಿ ಸೋಲಾರ್, ಗೋಲ್ಡಿ ಸೋಲಾರ್, ಡೆಯೆ, ಶಾಶ್ವತ ಎನರ್ಜಿ, ಕೆಸಿಸಿಐ ಉದ್ದಿಮೆದಾರರ ಸಮಿತಿ ಸಹಯೋಗದಲ್ಲಿ ಇಲ್ಲಿಯ ಜೆಸಿ ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ‘ಪ್ರಧಾನ ಮಂತ್ರಿ ಸೌರಗೃಹ: ಉಚಿತ ವಿದ್ಯುತ್ ಯೋಜನೆ-ಶಕ್ತಿಯ ಸ್ವಾತಂತ್ರ್ಯದತ್ತ ಒಂದು ಹೆಜ್ಜೆ ಕುರಿತು ಅರಿವು ಮೂಡಿಸುವುದು ಹಾಗೂ ಜನರು ತಮ್ಮ ಮನೆಗಳ ಛಾವಣಿ ಮೇಲೆ ಸೌರಶಕ್ತಿ ಅಳವಡಿಸಿಕೊಳ್ಳಲು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಹೆಸ್ಕಾಂ ವಿಭಾಗಾಧಿಕಾರಿ ಮಂಜುನಾಥ ದೊಡ್ಡಮನಿ ಹಾಗೂ ಸಹಾಯಕ ಇಂಜಿನಿಯರ್ ದೀಪಕ್ ಅಲ್ಲು ಮಾತನಾಡಿ, ಸೋಲಾರ್ ಅಳವಡಿಕೆಯಿಂದ ವಿದ್ಯುತ್ ಉಳಿತಾಯವಾಗುವುದಲ್ಲದೇ ಗ್ರಾಹಕರಿಗೆ ಗಳಿಕೆಯೂ ಆಗಲಿದೆ. ಮುಂಬರುವ ದಿನಗಳಲ್ಲಿ ಸೋಲಾರ್ ಮೇಲೆ ಅವಲಂಬನೆ ಆಗುವುದು ಒಳಿತು ಎಂದರು. ಅಲ್ಲದೇ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.
ವಿವಿಧ ಸೋಲಾರ್ ಕಂಪನಿಗಳ ಅಧಿಕಾರಿಗಳಾದ ಶಶಾಂಕ ರೇವಣಕರ, ಅಭಿಜಿತ್ ಲಿಮಯೆ, ಅನೂಪ್ ಶೆಟ್ಟಿ, ಪ್ರಶಾಂತ ಬೈಂದೂರು, ಸಂದೀಪ ಬೀರನೂರು ಅವರು ಹಲವು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು.
ಕೆಸಿಸಿಐ ಯುವ ಉದ್ಯಮಿ ವಿಭಾಗದ ಕೋ ಚೇರ್ಮನ್ ಮುಖೇಶ ಬಾಫಣಾ ಮಾತನಾಡಿದರು.
ಉಪಾಧ್ಯಕ್ಷರಾದ ಸಂದೀಪ ಬಿಡಸಾರಿಯಾ, ಪ್ರವೀಣ ಅಗಡಿ, ಗೌರವ ಕಾರ್ಯದರ್ಶಿಗಳಾದ ರವೀಂದ್ರ ಬಳಿಗಾರ, ಮಹೇಂದ್ರ ಸಿಂಘಿ, ಮಾಜಿ ಅಧ್ಯಕ್ಷ ಎಂ.ಸಿ. ಹಿರೇಮಠ, ರಮೇಶ ಪಾಟೀಲ, ಮಹೇಂದ್ರ ಲದ್ದಡ, ವಿನಯ ಜವಳಿ, ಸದಸ್ಯರಾದ ಸತೀಶ ಮುನವಳ್ಳಿ, ಶಾಶ್ವತ ಪೂಜಾರ, ಎಸ್.ಜಿ. ಕೆಮತೂರ, ನರೇಶ ಶಹಾ, ವೀರಣ್ಣ ಕಲ್ಲೂರ, ವಿಜಯ ಭಾರತಿ, ದಯಾನಂದ ಮಗಜಿಕೊಂಡಿ ಇತರರಿದ್ದರು.
ಕೆಸಿಸಿಐ ಅಧ್ಯಕ್ಷ ಎಸ್.ಪಿ. ಸಂಶಿಮಠ ಸ್ವಾಗತಿಸಿದರು. ಯುವ ಉದ್ದಿಮೆದಾರರ ಸಮಿತಿ ಚೇರ್ಮನ್ ಜಿನದತ್ತ ಓಸ್ವಾಲ್ ವಂದಿಸಿದರು.