ಹಗರಿಬೊಮ್ಮನಹಳ್ಳಿ ಜೆಸ್ಕಾಂ ವಿಭಾಗೀಯ ಕಚೇರಿ ಎಇ ಸತೀಶ್ ಮತ್ತು ಎಇಇ ನಾಗರಾಜ ಕುರೆಕುಪ್ಪ ಅವರಿಗೆ ರೈತರು ಮನವಿ ಸ್ವೀಕರಿಸಿದರು. ತಾಲೂಕು ಅಧ್ಯಕ್ಷ ಹರಟೆ ಕಾಳಪ್ಪ, ಕಾರ್ಯದರ್ಶಿ ರವಿ ತಂಬ್ರಹಳ್ಳಿ, ಗೌರವಾಧ್ಯಕ್ಷ ಹಲಿಗೇರಿ ಮಹೇಶ, ಉಪಾಧ್ಯಕ್ಷ ನಾಗೇಂದ್ರಪ್ಪ, ಸಹ ಕಾರ್ಯದರ್ಶಿ ಮುದುಕಪ್ಪ ಇತರರಿದ್ದರು. 
ಜಿಲ್ಲೆ

ವಿದ್ಯುತ್ ಪೂರೈಕೆಯಲ್ಲಿ ಮೀನಮೇಷ ಸಲ್ಲ

Kopala - Desk - Eraveni

ಹಗರಿಬೊಮ್ಮನಹಳ್ಳಿ: ಜೆಸ್ಕಾಂ ಇಲಾಖೆ ವಿದ್ಯುತ್ ಕಿರಿಕಿರಿ ಹಾಗೂ ಪರಿಪೂರ್ಣ ವಿದ್ಯುತ್ ಸರಬರಾಜು ಮಾಡದ ಕಾರಣ ರಾಜ್ಯ ರೈತ ಸಂಘದ ತಾಲೂಕು ಪದಾಧಿಕಾರಿಗಳು ಜೆಸ್ಕಾಂ ಇಲಾಖೆಯ ವಿಭಾಗೀಯ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.

ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಗೋಣಿಬಸಪ್ಪ ಮಾತನಾಡಿ, ಸರ್ಕಾರ ನುಡಿದಂತೆ ನಡೆದುಕೊಳ್ಳುತ್ತಿಲ್ಲ. ರೈತರ ಕಣ್ಣೀರೊರೆಸುವ ತಂತ್ರದಿಂದ, ರೈತರ ಪಂಪ್‌ಸೆಟ್‌ಗಳಿಗೆ 7ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತೆ ಎಂದು ಆದೇಶಿಸಿದರೂ ಇಲಾಖೆ ವಿದ್ಯುತ್ ನೀಡುವಲ್ಲಿ ಮೀನಮೇಷ ಎಣಿಸುತ್ತಿದೆ. ಅಲ್ಲದೆ ಆಗಾಗ ವಿದ್ಯುತ್ ನೀಡುವುದು ಮತ್ತು ತೆಗೆಯುವ ಕಿರಿಕಿರಿಯಿಂದ ರೈತರು ಬೆಳೆದ ಬೆಳೆಗಳೆಲ್ಲ ಒಣಗುತ್ತಿವೆ. ರಾಜ್ಯದ ರೈತರು ನೆಮ್ಮದಿಯಿಂದ ಇರಲು ಸರ್ಕಾರ ಬಿಡುತ್ತಿಲ್ಲ ಎಂದು ಆರೋಪಿಸಿದರು.

ಅಧಿಕಾರಿಗನ್ನು ಬಿಸಿಲಲ್ಲಿ ನಿಲ್ಲಿಸಿ ಪ್ರತಿಭಟನೆ: ಪ್ರತಿಭಟನೆ ಮಾಡಿ ಇಲಾಖೆಗೆ ಬೀಗ ಹಾಕಲು ಸಿದ್ದರಾದ ರೈತರಿಗೆ, ರಕ್ಷಣಾ ಇಲಾಖೆ ಪೊಲೀಸ್ ಅಧಿಕಾರಿಗಳು ಕಿವಿಮಾತು ಹೇಳಿ, ಅಧಿಕಾರಿಗಳೊಂದಿಗೆ ಚರ್ಚಿಸುವ ಅವಕಾಶ ಕಲ್ಪಿಸಿಕೊಟ್ಟರು.

ಆದರೂ ಪಟ್ಟುಬಿಡದ ರೈತರ ಮಾತಿಗೆ ಮಣಿದು ಜೆಸ್ಕಾಂ ಇಲಾಖೆ ಅಧಿಕಾರಿಗಳು ಕಚೇರಿಯಿಂದ ಹೊರಬಂದು ಪ್ರತಿಭಟನೆ ಮುಗಿಯುವವರೆಗೂ ಸುಡುಬಿಸಿಲಿನಲ್ಲಿ ನಿಲ್ಲುವಂತ ಸ್ಥಿತಿ ಬಂದೊದಗಿತು. ಬಳಿಕ ಪ್ರತಿಭಟನಾಕಾರರು ಕಚೇರಿಗೆ ಬೀಗ ಹಾಕುವುದು ಬಿಟ್ಟು ಕೆಲ ಕಾಲ ಧರಣಿ ಕುಳಿತರು. ನಂತರ ಇಲಾಖೆ ಎಇ ಸತೀಶ್ ಮತ್ತು ಎಇಇ ನಾಗರಾಜ ಕುರೆಕುಪ್ಪ ರೈತರ ಮನವಿ ಸ್ವೀಕರಿಸಿದರು.

ಪ್ರಮುಖರಾದ ಬಾಣದ ಶಿವಪ್ಪ, ಬೆಣಕಲ್ ಬಸವರಾಜಪ್ಪ, ವಸಂತಕುಮಾರ, ಮಾಬುಸಾಬ್, ಕುರಿ ನಾಗೇಂದ್ರ, ಒಪ್ಪತೇಶ, ಎಚ್.ನಾಗರಾಜ, ಆರ್.ಎಂ.ವೀರೇಶ, ಎಚ್.ಶೇಖರಪ್ಪ, ಶರಣಪ್ಪ, ಕೆ.ನಿಂಗಪ್ಪ, ಎ.ಬಸವರಾಜ, ಗಡ್ಡಿನಿಂಗಪ್ಪ, ಕೆ.ಶಿವಣ್ಣ ಇತರರಿದ್ದರು.