ಕೊಳಕೇರಿ ಗ್ರಾಮದ ಚಪ್ಪಂಡಡಿ ಅಂಗನವಾಡಿ ಬಳಿ ನಾಪೋಕ್ಲು ಶೌರ್ಯ ತಂಡದ ಸದಸ್ಯರು ಶ್ರಮದಾನದ ಮೂಲಕ ಗಿಡ ಗಂಟಿಗಳನ್ನು ತೆರವುಗೊಳಿಸಿದರು. 
ಜಿಲ್ಲೆ

ಅಂಗನವಾಡಿಗೆ ವಿದ್ಯುತ್ ಸಂಪರ್ಕ

ನಾಗೇಶ ಎಸ್

ನಾಪೋಕ್ಲು: ಸಮೀಪದ ಕೊಳಕೇರಿ ಗ್ರಾಮದ ಚಪ್ಪಂಡಡಿ ಅಂಗನವಾಡಿಗೆ ನಾಪೋಕ್ಲು ಶೌರ್ಯ ತಂಡ ಸದಸ್ಯರು ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವ ಮೂಲಕ ನಾಗರಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅಂಗನವಾಡಿಯಲ್ಲಿ ಗಿಡಗಂಟಿಗಳು ಬೆಳೆದು ಕಳೆದ ಮೂರು ತಿಂಗಳಿನಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. ಗಿಡಗಂಟಿ ತೆರವುಗೊಳಿಸಿದರೆ ಮಾತ್ರ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಸಾಧ್ಯ ಎಂದು ನಿಗಮದ ಅಧಿಕಾರಿಗಳು ಹೇಳಿದ್ದರು.
ಅದರಂತೆ ನಾಪೋಕ್ಲು ಶೌರ್ಯ ತಂಡ ಸದಸ್ಯರು ಶ್ರಮದಾನದ ಮೂಲಕ ಗಿಡ ಗಂಟೆಗಳನ್ನು ತೆರವುಗೊಳಿಸಿ ವಿದ್ಯುತ್ ವ್ಯವಸ್ಥೆ ಕಲ್ಪಿಸಿಕೊಟ್ಟರು. ಸೇವಾ ಕಾರ್ಯದಲ್ಲಿ ಶಂಕರ್, ದಿಲೀಶ್, ಮಾಯಿಲಪ್ಪ, ಉಮಾಲಲಕ್ಷ್ಮೀ, ಚಂದ್ರಕಲಾ, ಸುನೀತಾ, ಸಂಯೋಜಕಿ ದಿವ್ಯಾ ಹಾಗೂ ಅಂಗನವಾಡಿ ಶಿಕ್ಷಕಿಯರಾದ ಶ್ವೇತಾ, ಆಶಾಲತಾ, ಸಹಾಯಕಿ ಗೀತಾ ಇದ್ದರು.