ಜಿಲ್ಲೆ

ಸಾವಿಗೆ ಕಾದು ಕುಳಿತ ವಿದ್ಯುತ್​ ತಂತಿಗಳು

ಕೋಲಾರ ಡೆಸ್ಕ್

ಮುಳಬಾಗಿಲು: ತಾಲೂಕಿನ ದುಗ್ಗಸಂದ್ರ ಹೋಬಳಿಯ ಎಚ್​. ಗೊಲ್ಲಹಳ್ಳಿಯ ಬೆಲ್ಲಾರ್​ಕೆರೆ, ಮಂಡಿಕಲ್​ ಕೆರೆ ಮತ್ತು ರಾಜಕಾಲುವೆ

ಹಾಗೂ ಸುತ್ತಮುತ್ತಲಿನ ಜಮೀನಿನಲ್ಲಿ ವಿದ್ಯುತ್​ ತಂತಿ ಜೋತಾಡುತ್ತಿದ್ದು ಸಾವಿಗೆ ಆಹ್ವಾನ ನೀಡುತ್ತಿದೆ.

ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲಲ್ಲಿ ಗಿಡಗಳಿಗೆ ತಾಗುವುದು, ಒಂದಕ್ಕೊಂದು ಲೈನ್​ಗಳ ತಾಕಿ ಬೆಂಕಿ ಕೆಂಡ ಸಿಡಿಯುವುದು, ಜಮೀನಿನಲ್ಲಿ ನಡೆದುಕೊಂಡು ಹೋಗುವವರಿಗೂ ತಾಗುವಷ್ಟರ ಮಟ್ಟಿಗೆ ತಂತಿ ಇಳಿ ಬಿದ್ದಿದೆ. ಕುರಿ, ಮೇಕೆ, ಹಸು, ಎಮ್ಮೆ ಮೇಯಿಸುವ ಜನರು ಓಡಾಡುವ ಸ್ಥಳ ಇದಾಗಿದ್ದು, ರೈತರು ಕೃಷಿ ಚಟುವಟಿಕೆಗಳಿಗೆ ನಿತ್ಯ ತಮ್ಮ ಜಮೀನುಗಳಲ್ಲಿ ತಿರುಗಾಡುತ್ತಾರೆ.

ಮಳೆ ಸುರಿದರೆ ಸಾಕು, ಜೀವವನ್ನು ಪಣಕ್ಕಿಟ್ಟು ಓಡಾಡುವ ದುಸ್ಥಿತಿ ಎದುರಾಗಿದೆ.

ಇಷ್ಟಾದರೂ ಸಹ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಬಗ್ಗೆ ಗಮನವಹಿಸದೇ ಇರುವುದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಎಚ್​.ಗೊಲ್ಲಹಳ್ಳಿಯಲ್ಲಿ ವಿದ್ಯುತ್​ ಉಪ ಕೇಂದ್ರವಿದ್ದರೂ ಈ ರೀತಿಯ ಸಮಸ್ಯೆಗಳನ್ನು ಬಗೆಹರಿಸದೇ ರ್ನಿಲಕ್ಷ$್ಯ ವಹಿಸಿರುವುದು ಸರಿಯಲ್ಲ. ಬೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು.

- ಎನ್​. ವೆಂಕಟರಮಣಪ್ಪ

ರಾಷ್ಟ್ರ ಪ್ರಶಸ್ತಿ ಪುರಸತ ನಿವೃತ ಶಿಕ, ಎಚ್​. ಗೊಲ್ಲಹಳ್ಳಿ

ಎಚ್​.ಗೊಲ್ಲಹಳ್ಳಿ ಸಮೀಪ ರೈತರ ತೋಟಗಳಲ್ಲಿ ವಿದ್ಯುತ್​ ತಂತಿಗಳು ಕೆಳಭಾಗಕ್ಕೆ ಇಳಿಬಿದ್ದಿರುವ ಬಗ್ಗೆ ಗಮನಕ್ಕೆ ತಂದಿದ್ದು, ತಣವೇ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು.

- ವಿ.ಎಂ.ರಮೇಶ್​

ಎಇಇ, ಬೆಸ್ಕಾಂ, ಮುಳಬಾಗಿಲ